ಎಂಎಲ್ ಸಿ ನಾಸೀರ್ ಅಹ್ಮದ್ ಪುತ್ರ ಸೇರಿ ಮೂವರು ಪೊಲೀಸರ ವಶ

ಬೆಂಗಳೂರು: ಪೆÇಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ವಿಧಾನ ಪರಿಷತ್ ಸದಸ್ಯ ನಾಸೀರ್ ಅಹ್ಮದ್ ಅವರ ಪುತ್ರ ಸೇರಿ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ಪೆÇಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕಾಂಗ್ರೆಸ್ ಎಂಎಲ್ ಸಿ ನಾಸೀರ್ ಅಹ್ಮದ್ ಪುತ್ರ ಪಯಾಜ್ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಳದ ಬಿಎಂಟಿಸಿ ಡಿಪೆÇೀ ಬಳಿ ಬರುತ್ತಿದ್ದ ವೇಳೆ ಕಾರು ತಡೆದು ಪೆÇಲೀಸರು, ಮದ್ಯಪಾನ ಮಾಡಿದ್ದನ್ನು ಪ್ರಶ್ನಿಸಿದಾಗ ನಾಸಿರ್ ಅಹಮದ್ ಅವರ ಪುತ್ರ ಫಯಾಜ್ ಅಹಮದ್ ಸೇರಿದಂತೆ ಮೂವರು ಪೆÇಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಹಲ್ಲೆ ನಡೆಸಿದ ಮೂವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೃತಹಳ್ಳಿ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.