ಭಾರತ್ ಬಂದ್ ಯಶಸ್ವಿಯಾಗಲ್ಲ -ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಇಂದಿನ ಭಾರತ್ ಬಂದ್ ಎಲ್ಲಿಯೂ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ವಿಧಾನ ಸವಧದಲ್ಲಿ ಸಿಎಂ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿಯೂ ಯಶಸ್ವಿಯಾಗಲ್ಲ ಎಂದು ಸಿಎಂ ಹೇಳಿದರು.
ಭಾರತ ಬಂದ್ ಎಲ್ಲೂ ಯಶಸ್ವಿಯಾಗಿಲ್ಲ. ಬೆಂಗಳೂರಿನಲ್ಲೂ ಯಶಸ್ವಿಯಾಗಲ್ಲ. ವಾಸ್ತವಿಕ ಅಂಶಗಳನ್ನು ಗಮನಿಸಬೇಕು ರಾಜಕೀಯ ಕಾರಣಕ್ಕಾಗಿ ಬಂದ್‍ಗೆ ಕರೆ ನೀಡುವುದು ಸರಿಯಲ್ಲ ಎಂದು ಸಿಎಂ ತಿಳಿಸಿದರು.
ಕಾಂಗ್ರೆಸ್ಸಿಗರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ ಬಗ್ಗೆಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಳುಗಿ ಹೋಗುತ್ತಿರುವ ಹಡಗು. ಅವರು ಕಪ್ಪು-ಬಿಳಿ ಯಾವ ಬಣ್ಣದ ಪಟ್ಟಿಯನ್ನಾದರೂ ಧರಿಸಲಿ, ಅವರನ್ನು ಯಾರು ಕೇಳುತ್ತಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರೈತ ಪರವಾದ ಸರ್ಕಾರ ನಮ್ಮದು. ರೈತ ಪರವಾದ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆಂದರು.