ಬೆಂಗಳೂರು: ಲಾಕ್ ಡೌನ್ ಎಫೆಕ್ಟ್‍ನಿಂದಾಗಿ ಒಂದರಿಂದ 12ನೇ ತರಗತಿ ವರೆಗಿನ ಪಠ್ಯದಲ್ಲಿ ಶೇ. 45ರಷ್ಟು ಕಡಿತ ಮಾಡುವ ಚಿಂತನೆ ನಡೆದಿದೆ.
ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ಸಾಕಷ್ಟು ವಿಳಂಬವಾಗಿದ್ದರಿಂದ ಮೊದಲು ಶೇ. 30ರÀಷ್ಟು ಪಠ್ಯ ಕಡಿತ ಮಾಡಲು ನಡೆಸಿದ್ದ ಆಲೋಚನೆಗೆ ಬದಲಾಗಿ ಶೇ. 45ರಷ್ಟು ಪಠ್ಯ ಕಡಿತ ಮಾಡಲು ಚಿಂತನೆ ನಡೆದಿದೆ.
ಒಂದರಿಂದ 12 ತರಗತಿ ವರೆಗೆ ಇನ್ನು ಕೇವಲ ಆನ್‍ಲೈನ್ ತರಗತಿ ಮಾತ್ರ ನಡೆಯುತ್ತಿದ್ದು, ಪದವಿ ಮತ್ತು ನಂತರದ ತರಗತಿಗಳು ಮಾತ್ರ ಆರಂಭವಾಗಿರುವುದರಿಂದ ಹಾಗು ಇನ್ನೂ ಡಿಸೆಂಬರ್ ಅಂತ್ಯಕ್ಕೆ ಶಾಲೆ ಆರಂಭದ ಬಗ್ಗೆ ಸರ್ಕಾರ ನಿರ್ಧಾರ ತಳೆಯಲಿದೆ.
ಆದರೆ ಇಷ್ಟು ತಡವಾಗಿ ಶಾಲೆ ಕಾಲೇಜುಗಳು ಆರಂಭವಾದರೆ, ಇರುವ ಎಲ್ಲಾ ಪಠ್ಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈಗಾಗಲೇ ಶೇ. 30ರಷ್ಟು ಪಠ್ಯ ಕಡಿತ ಮಾಡಲು ಯೋಚಿಸಲಾಗಿತ್ತು ಅದನ್ನು ಮತ್ತಷ್ಟು ಹೆಚ್ಚಿಸುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಲಾಕ್ ಡೌನ್ ಎಫೆಕ್ಟ್: ಪಠ್ಯದಲ್ಲಿ ಶೇ. 45ರಷ್ಟು ಕಡಿತಕ್ಕೆ ಚಿಂತನೆ

