ಹುಬ್ಬಳ್ಳಿ: ವಿಧಾನ ಪರಿಷತ್ ಇತಿಹಾಸದಲ್ಲಿಯೇ ಈ ರೀತಿಯ ವಿಷಾದಕರ ಘಟನೆ ನಡೆದದ್ದು ಇದೇ ಮೊದಲು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸಚಿವ ಈಶ್ವರಪ್ಪ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬಂಡತನದಿಂದ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಾಡಿದ ಕುತಂತ್ರ ರಾಜಕಾರಣವಿದು ಎಂದರು
ಪರಿಷತ್ ನಲ್ಲಿ ಬಿಜೆಪಿ, ಜೆಡಿಎಸ್ ಗೆ ಬಹುಮತ ಇರಲಿಲ್ಲವೆಂದು ರಾಜ್ಯದ ಜನರೆದುರು ಡಿಕೆಶಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ. ಅವಿಶ್ವಾಸ ಪತ್ರವನ್ನು ಮೊದಲೆ ಕೊಟ್ಟಿದ್ದು, ಪರಿಗಣನೆಗೆ ತೆಗೆದುಕೊಳ್ಳದೆ ಅಜೆಂಡಾದಲ್ಲಿ ಯಾಕೆ ತರಲಿಲ್ಲ, ಇದೊಂದು ವ್ಯವಸ್ಥಿತ ಸಂಚು ಎಂದು ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದದರು.
ಜೆಡಿಎಸ್ ಬಿಜೆಪಿ ಒಂದಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಪ್ರತಾಪ್ ಚಂದ್ರ ಶೆಟ್ಟಿ ಸಜ್ಜನ ರಾಜಕಾರಣಿ, ಅವರಿಗೂ ಕಪ್ಪು ಚುಕ್ಕೆ ಬರುವಂತೆ ಮಾಡಿದ್ದಾರೆ, ಇದೊಂದು ಪೂರ್ವನಿಯೋಜಿತ ಸಂಚು ಎಂದರು.
ಬಹುಮತವಿಲ್ಲದೆ ಅಲ್ಪಸಂಖ್ಯಾತರಾದ ಬಳಿಕ ರಾಜೀನಾಮೆ ಕೊಡಬೇಕಿತ್ತು. ಪರಿಷತ್ ನಲ್ಲಿ ನಡೆದ ಘಟನೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
ಬಹುಮತ ಇಲ್ಲದಿರುವವರನ್ನು ಮುಂದುವರಿಸಲು ಸಾಧ್ಯವೆ ಇಲ್ಲ. ದಾದಾಗಿರಿ ಮಾಡಿಕೊಂಡು ಬಹುಮತ ಇಲ್ಲದಿದ್ದರೂ ನಾವು ಸಭಾಪತಿಯನ್ನು ಮುಂದುವರಿಸಿಕೊಂಡು ಹೋಗುತ್ತೆವೆ ಎನ್ನುವುದನ್ನ ಜನ ಕ್ಷಮಿಸುವುದಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಪ್ರತಾಪ್ ಚಂದ್ರ ಶೆಟ್ಟರು ಅವರೇ ರಾಜಿನಾಮೆ ಕೊಡಬೇಕಿತ್ತು. ರಾಜೀನಾಮೆ ಕೊಟ್ಟ ಬಳಿಕ ಯಾರು ಸಭಾಪತಿ ಆಗಬೇಕು ಎನ್ನುವುದು ಜೆಡಿಎಸ್ ಮತ್ತು ಬಿಜೆಪಿಯವರು ಕುಳಿತು ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತಿ ಚುನಾವಣೆ ಕುರಿತು ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆ ಯಲ್ಲಿ ಶೇ. 80ರಷ್ಟು ಸ್ಥಾನಗಳನ್ನ ಗೆಲ್ಲುತ್ತೆವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಬಂಡತನದಿಂದ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಮಾಡಿದ ಕುತಂತ್ರ -ಸಚಿವ ಕೆ.ಎಸ್.ಈಶ್ವರಪ್ಪ

