ಬೆಂಗಳೂರು: ಈ ಬಾರಿಯೂ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಖ್ಯಾತ ನಟ ದರ್ಶನ್ ಹೇಳಿದ್ದಾರೆ.
ಭಾನುವಾರ ಫೇಸ್‍ಬುಕ್ ಲೈವ್‍ಗೆ ಬಂದ ದರ್ಶನ್ ಮೊದಲು ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿ ಹೊಸ ವರ್ಷ ಎಲ್ಲರ ಬಾಳಿನಲ್ಲೂ ಹರ್ಷ ತರಲಿ ಎಂದರು.
ಈ ಬಾರಿಯೂ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ದರ್ಶನ್ ಹೇಳಿ, ಈ ಬಾರಿಯ ಜನ್ಮದಿನದಂದು ನಾನು ಊರಿನಲ್ಲಿ ಇರುವುದಿಲ್ಲ ಅಂದು ನಮ್ಮ ಮನೆಯ ಬಳಿ ಬರಬೇಡಿ ಎಂದು ಹೇಳಿದರು.
ರಾಬರ್ಟ್ ಚಿತ್ರವನ್ನು ಮಾರ್ಚ್ 11ರಂದು ಬಿಡುಗಡೆ ಮಾಡಲು ಎಇಲ್ಲ ರಿತಿಯ ಸಿದ್ಧತೆ ನೆಡೆದಿದೆ ಎಂದು ದರ್ಶನ್ ಹೇಳಿದರು.
ಚಿತ್ರಮಂದಿರದಲ್ಲಿ ಅಭಿಮಾನಿಗಳು ತಟ್ಟುವ ಚಪ್ಪಾಳೆ ಸದ್ದು ನಟರಿಗೆ ಮುಖ್ಯವಾಗಿರುವುದರಿಂದ ರಾಬರ್ಟ್ ಚಿತ್ರವನ್ನು ಥಿಯೇಟರ್ ನಲ್ಲೇ ಬಿಡುಗಡೆ ಮಾಡುವುದಾಗಿಯೂ ದರ್ಶನ್ ತಿಳಿಸಿದರು.
ಕೊರೊನಾದಿಂದಾಗಿ ಸದ್ಯ ಸರ್ಕಾರ ಚಿತ್ರಮಂದಿರದ ಶೇ. 50ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿದ್ದರೂ ನಮ್ಮ ರಾಬರ್ಟ್ ಚಿತ್ರವು ಚಿತ್ರಮಂದಿರದಲ್ಲೇ ಬಿಡುಗಡೆ ಆಗುತ್ತದೆ ಎಂದು ದರ್ಶನ್ ಹೇಳಿದರು.
ಈ ಬಾರಿಯೂ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ -ದರ್ಶನ್

