ಕರ್ನಾಟಕದಲ್ಲಿ ಮತ್ತೆ ಸನ್ ಸ್ಟ್ರೋಕ್ ಮುಂದುವರೆಯುತ್ತದೆ -ಹೆಚ್.ವಿಶ್ವನಾಥ್

ರಾಯಚೂರು: ಕರ್ನಾಟಕದಲ್ಲಿ ಮತ್ತೆ ಸನ್ ಸ್ಟ್ರೋಕ್ ಮುಂದುವರೆಯುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ವಿಶ್ವನಾಥ್ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸನ್ ಸ್ಟ್ರೋಕ್ ನಿಂದ ಬಿಜೆಪಿ ಹಾಳಾಗುತ್ತಿದೆ. ಜನತಾ ಪರಿವಾರ ಸಹ ಸನ್ ಸ್ಟ್ರೋಕ್ ನಿಂದ ಹಾಳಾಯಿತು. ಕಾಂಗ್ರೆಸ್ ಪಕ್ಷ ಕೂಡ ಸನ್ ಸ್ಟ್ರೋಕ್ ನಿಂದಲೇ ಹಾಳಾಯ್ತು, ಕುಟುಂಬ ರಾಜಕಾರಣದಿಂದ ಯಡಿಯೂರಪ್ಪ ಹಾಳಾಗಿದ್ದಾರೆಂದು ವಿಶ್ವನಾಥ್ ಮಾರ್ಮಿಕವಾಗಿ ನುಡಿದರು.
ಕುಟುಂಬ ರಾಜಕಾರಣದಿಂದ ಯಡಿಯೂರಪ್ಪ ಹಾಳಾಗ್ತಾರೆ. ವಿಜಯೇಂದ್ರನ ಹಸ್ತಕ್ಷೇಪದಿಂದಲೇ ಶಾಸಕರು ಬಂಡೆದಿದ್ದಾರೆ. ರಾಜ್ಯದಲ್ಲಿ ಒಬ್ಬ ಭ್ರಷ್ಟ, 420ಗೆ ಮಂತ್ರಿ ಸ್ಥಾನ ನೀಡಿದ್ದಾರೆಂದರು.
ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದಾರೆ. ನಾಗೇಶ್, ಮುನಿರತ್ನರನ್ನು ಕಡೆಗಣಿಸಿ ಭ್ರಷ್ಟರಿಗೆ ಮಣೆ ಹಾಕಿದ್ದಾರೆ. ಇದಕ್ಕಾ ನಾವು ರಾಜೀನಾಮೆ ಕೊಟ್ಟು ಬಂದಿದ್ದು? ಎಂದು ವಿಶ್ವನಾಥ್ ಪ್ರಶ್ನಿಸಿದರು. ರಮೇಶ್ ಜಾರಕಿಹೊಳಿ ಇದನ್ನೆಲ್ಲಾ ಯಾಕೆ ಬೆಂಬಲಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.