ಬಿಜೆಪಿ ಎಂದರೆ ಬ್ಲಾಕ್ ಮೇಲ್ ಜನತಾ ಪಾರ್ಟಿ -ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಎಂದರೇ ಭಾರತೀಯ ಜನತಾ ಪಕ್ಷವಲ್ಲ. ಅದು ಬ್ಲಾಕ್ ಮೇಲ್ ಜನತಾ ಪಾರ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಡಿಕೆಶಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬಿಜೆಪಿ ನಾಯಕರು ಹೇಳಿದ ಸಿಡಿ ತನಿಖೆಯಾಗಬೇಕು. ಸಿಡಿ ಒಳಗೆ ಏನಿದೆ ಎಂದು ಅವರಿಗೆ ಗೊತ್ತಿದೆ. ಈ ಬಗ್ಗೆ ಇಡಿ, ಎಸಿಬಿ ಯಾಕೆ ಸುಮೋಟೊ ಕೇಸ್ ಹಾಕುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದರು.
ಸಿಡಿ ಬಗ್ಗೆ ಹಾಲಿ ಹೈಕೋರ್ಟ್ ನ್ಯಾಯಾಮೂರ್ತಿಗಳ ನೇತೃತ್ವದ ತನಿಖೆ ಆಗಬೇಕು ಎಂದರು.
ದೇಶದ ರೈತರಿಗೆ ಬೆಂಬಲ ಸೂಚಿಸಲು ಕರ್ನಾಟಕ ಕಾಂಗ್ರೆಸ್ ತೀರ್ಮಾನಿಸಿದ್ದು, ಜ. 20ರಂದು ರಾಜಭವನ ಚಲೋ ನಡೆಸಲು ಉದ್ದೇಶಿಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.