ವಿಶ್ವನಾಥ ಅವರು ಏನು ಮಾತನಾಡಿದರೂ ನಮಗೆ ಆಶೀರ್ವಾದ -ರಮೇಶ ಜಾರಕಿಹೊಳಿ

ಹುಬ್ಬಳ್ಳಿ: ವಿಶ್ವನಾಥ ನಮ್ಮ ಗುರುಗಳು ಅವರು ಏನು ಮಾತನಾಡಿದ್ರು ನಮಗೆ ಆಶೀರ್ವಾದ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಚಿವ ರಮೇಶ್ ಜಾರಕಿಹೊಳಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಹೆಚ್. ವಿಶ್ವನಾಥ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಗುರುಗಳು. ಅವರ ಮಾತು ನಮಗೆ ಆಶೀರ್ವಾದ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಹೆಚ್ ವಿಶ್ವನಾಥ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದರೂ ನಮಗೆ ಆಶೀರ್ವಾದವಿದಂತೆ. ಆದರೆ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರ ಕೋರ್ಟ್‍ನಲ್ಲಿದೆ. ಕಾನೂನು ಅಡೆತಡೆ ಇದೆ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ ಅವರ ಬಗ್ಗೆ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನ-ಮಾನ ಸಿಗಬೇಕು ಎಂಬುದು ಕೂಡ ಆಗ್ರಹವಿದೆ. ಆದರೆ ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಸಿಪಿ ಯೋಗೀಶ್ ಅವರ ಮೇಲೆ ಗಂಭೀರ ಆರೋಪಗಳಿದ್ದರೆ ವರಿಷ್ಟರ ಗಮನಕ್ಕೆ ತಂದರೆ ಅವರು ಕ್ರಮ ತಗೆದುಕೊಳ್ಳುತ್ತಾರೆ. ಇನ್ನು ವಿಜಯೇಂದ್ರ ಅವರು ಎಲ್ಲದರೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗ ಅಂತ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ. ಬೇರೆ ಇಲಾಖೆಗೂ ಅವರು ಕೈ ಹಾಕಿಲ್ಲ ಎಂದು ಸಚಿವ ರಮೇಶ್ ಜಾರಕಿಹೊಳಿಯವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.