ಏಪ್ರಿಲ್ ಬಳಿಕ ಯಡಿಯೂರಪ್ಪನನ್ನು ತೆಗೆಯುತ್ತಾರೆ -ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ಏಪ್ರಿಲ್ ಬಳಿಕ ಯಡಿಯೂರಪ್ಪ ನನ್ನು ತೆಗೆಯುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನಗೆ ಆರ್.ಎಸ್.ಎಸ್. ಮೂಲಗಳಿಂದ ಮಾಹಿತಿ ಇದೆ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಮುಂದುವರೆಯುತ್ತಾರೆ ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇನ್ನೇನು ತೆಗೆಯುತ್ತೇನೆಂದು ಹೇಳುವುದಕ್ಕೆ ಆಗುತ್ತಾ ಎಂದರು.
ಯಾವುದೇ ಪಾರ್ಟಿಯ ಹೈಕಮಾಂಡ್ ಆದರೂ, ತೆಗೆಯುತ್ತೇನೆಂದು ಹೇಳಲ್ಲ. ಹೈಕಮಾಂಡ್ ತೆಗೆಯುತ್ತೇನೆ ಎಂದರೆ ಸರ್ಕಾರ ನಡೆಯುತ್ತಾ ಕೆಲಸ ಮಾಡೋವುದಕ್ಕೆ ಆಗುತ್ತಾ ಎಂದರು.
ಸಿಎಂ ವಿರುದ್ಧ ಸಿಡಿ ಬ್ಲಾಮೇಲ್ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನ್ ಮಾಡಿದ್ದಾನೋ ಯಾರಿಗೆ ಗೊತ್ತು? ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ ಸಿಡಿ ಅದು ಗೊತ್ತಾಗಬೇಕು ಅಲ್ಲವೇ? ಈ ಬಗ್ಗೆ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿಡಿಲಿ ಏನೇನ್ ಮಾಡಿದಾರೋ ಅನ್ನೊದು ಬಹಿರಂಗವಾಗಲಿ. ಎಲ್ಲವೂ ಗೊತ್ತಾಗಬೇಕು ಅಂದರೆ, ತನಿಖೆಯಾಗಬೇಕು ಎಂದರು.
ಶರತ್ ಬಚ್ಚೆಗೌಡ ಪಕ್ಷಕ್ಕೆ ಬರುವ ಬಗ್ಗೆ ಮಾತುಕತೆ ನಡಯುತ್ತಿದೆ. ಇನ್ನೊಂದು 15 ದಿನದಲ್ಲಿ ಈ ಈ ಬಗ್ಗೆ ತೀರ್ಮಾನವಾಗುತ್ತೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.