ಬದಲಾವಣೆ ಆಗುತ್ತೆ ಅಂತ ಸಿದ್ದರಾಮಯ್ಯ ಒಂದು ನೂರು ಸಾರಿ ಹೇಳಿದ್ದಾರೆ -ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು: ಬದಲಾವಣೆ ಆಗುತ್ತೆ ಅಂತ ಒಂದು ನೂರು ಸಾರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈಶ್ವರಪ್ಪ ಮಾತನಾಡಿದರು.
ಸಿದ್ದರಾಮಯ್ಯನವರು ಈ ರೀತಿ ಹೇಳುತ್ತಿರುವುದು ಇದೇ ಮೊದಲೇನಲ್ಲ. ಅವರು ಹೇಳ್ತಾನೆ ಇರಲಿ, ಈ ಸರ್ಕಾರ ಪೂರ್ಣವಾಗಿ ಮುಂದುವರೆಯುತ್ತೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಏಪ್ರಿಲ್ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಮೊದಲು ಹಾಗೂ ಗ್ರಾಪಂ ಚುನಾವಣೆ ಬಳಿಕ ಸಿಎಂ ಬದಲಾಗ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಶಿರಾ, ಆರ್.ಆರ್. ನಗರ ಉಪಚುನಾವಣೆ ಸಂದರ್ಭದಲ್ಲೂ ಇದನ್ನೇ ಹೇಳಿದ್ದರು ಎಂದರು.
ಯಾವ ಸಿಡಿನೂ ಇಲ್ಲ, ಸುಮ್ನೆ ಬಾಯಿಗೆ ಬಂದ್ಹಾಗೆ ಮಾತಾಡ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದರು.