ನವದೆಹಲಿ: ಕೃಷಿ ಕಾನೂನು ವಿರೋಧಿಸಿ ಜ. 26ರಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಪ್ರಕರಣದಲ್ಲಿ 22 ಎಫ್‍ಐಆರ್ ಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ 22 ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ ಘಟನೆಯಲ್ಲಿ 100ಕ್ಕೂ ಹೆಚ್ಚು ಪೆÇಲೀಸರು ಗಾಯಗೊಂಡಿದ್ದಾರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ 60 ದಿನಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಜ.26 ರಂದು ತಮ್ಮ ಬೇಡಿಕೆ ಈಡೇರಿಸಲು ಹಾಗೂ ಸರ್ಕಾರದ ವಿರುದ್ಧ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಅನುಮತಿ ಕೋರಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಭರವಸೆ ನೀಡಿದ್ದರು.
ಆದರೆ ಪ್ರತಿಭಟನ ವೇಳೆ ಪೆÇಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಪೊಲೀಸರ ಮೇಲೆ ಟ್ರ್ಯಾಕ್ಟರ್ ನುಗ್ಗಿಸುವ ಯತ್ನ ಸಹ ನಡೆದಿದೆ. ತಲ್ವಾರ್ ಬೀಸಿದ ಘಟನೆಯೂ ಪ್ರತಿಭಟನೆ ವೇಳೆ ನಡೆದದೆ.
ಪ್ರತಿಭಟನಾನಿರತ ರೈತರು ಕೆಂಪು ಕೋಟೆಗೆ ಲಗ್ಗೆ ಹಾಕಿ ತ್ರಿವರ್ಣ ಧ್ವಜದ ಕೆಳಭಾಗದಲ್ಲಿ ಧರ್ಮವೊಂದರ ಧ್ವಜಾರೋಹಣ ಮಾಡಿದ್ದಾರೆ.
ಆದರೆ ಈ ಹಿಂಸಾಚಾರಕ್ಕೂ ತಮಗೂ ಸಂಬಂಧವಿಲ್ಲ ಎಂದು ರೈತ ಸಂಘಟನೆ ಮುಖಂಡರು ಹೇಳಿದ್ದಾರೆ.

