ನವ ದೆಹಲಿ: ಬೆಂಗಳೂರಿನ ನಮ್ಮ ಮೆಟ್ರೋ ಫೇಸ್-2ಎ ಮತ್ತು 2ಬಿ ಗೆ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿ ಗೆ 48,788 ಕೋಟಿ ರೂಗಳ ಅನುದಾನ ಘೋಷಣೆ ಮಾಡಲಾಗಿದೆ.
ಹಾಗೆಯೇ ಚೆನ್ನೈ ಮತ್ತು ಕೇರಳದ ಎರಡನೇ ಫೇಸ್ ಮೆಟ್ರೋ ನಿರ್ಮಾಣಕ್ಕೂ ಹಸಿರು ನಿಶಾನೆ ತೋರಲಾಗಿದೆ.
ರೈಲ್ವೆ ವಲಯದ ಅಭಿವೃದ್ಧಿಗೆ 1.10 ಲಕ್ಷ ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ.
ರೈಲ್ವೆ ಜೊತೆಗೆ ಮೆಟ್ರೋ ಪಾಲಿಟನ್ ಸಿಟಿಗಳ ಮೆಟ್ರೋ ರೈಲ್ವೆ ಚಾಲಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.
ಇದಲ್ಲದೆ 2023ರ ವೇಳೆಗೆ ಇಡೀ ಬ್ರಾಡ್‍ಗೇಜ್ ಮಾರ್ಗವನ್ನು ಸಂಪೂರ್ಣವಾಗಿ ವಿದ್ಯುತೀಕರಣಗೊಳಿಸಲಾಗುವುದು ಈ ಮೂಲಕ ಹಣದ ಉಳಿತಾಯಕ್ಕೆ ಒತ್ತು ನೀಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ವರ್ಷದ ಕೇಂದ್ರ ಬಜೆಟ್‍ನಲ್ಲಿ ಭಾರತೀಯ ರೈಲ್ವೆಯನ್ನು ಮೇಲ್ದರ್ಗೆ ಏರಿಸುವ ಗುರಿ ಹೊಂದಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು ನಮ್ಮ ಮೆಟ್ರೋ ಫೇಸ್ 2ಗೆ ಅನುದಾನ ಘೋಷಣೆ

