ನೈಪಿಟಾವ್: ಮ್ಯಾನ್ಮಾರ್ ನಲ್ಲಿ ಸೋಮವಾರ ನಡೆದ ಹಠಾತ್ ಬೆಳವಣಿಯಲ್ಲಿ ಆಂಗ್ ಸ್ಯಾನ್ ಸೂಕಿ ಸೇರಿ ಹಲವು ನಾಯಕರ ನ್ನು ಬಂಧಿಸಲಾಗಿದೆ.
ಮ್ಯಾನ್ಮಾರ್ ನ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿಯ ಮುಖ್ಯಸ್ಥೆ ಸ್ಟೇಟ್ ಕೌನ್ಸಿಲರ್ (ಪ್ರಧಾನಿ ಹುದ್ದೆಗೆ ಸಮನಾದ ಹುದ್ದೆ) ಅಂಗ್ ಸಾನ್ ಸೂಕಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ದೇಶದ ಮಿಲಿಟರಿ ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಿ ಹಂಗಾಮಿ ಅಧ್ಯಕ್ಷರಾಗಿ ಜನರಲ್ ಒಬ್ಬರನ್ನು ನೇಮಕ ಮಾಡಲಾಗಿದೆ.
ದೇಶದ ರಾಜಧಾನಿ ನೈಪಿಟಾವ್ ನ ಎಲ್ಲಾ ಸಂವಹನ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಫೆÇೀನ್ ಮತ್ತು ಇಂಟರ್ನೆಟ್ ಸಂಪರ್ಕಗಳು ಕಡಿತಗೊಂಡಿದೆ.
ದೇಶದ ಸ್ಥಿರತೆಯನ್ನು ಕಾಪಾಡಲು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದ್ದು ಅದನ್ನು ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಆರೋಪಿಸಿ ಮಿಲಿಟರಿ ತುರ್ತು ಪರಿಸ್ಥಿತಿಯನ್ನು ಹೇರಿದೆ ಎಂದು ಮಿಲಿಟರಿ ಒಡೆತನದ ಮ್ಯಾವಡ್ಡಿ ಟಿವಿ ಘೋಷಣೆ ಮಾಡಿದೆ.
ಕಳೆದ ವರ್ಷ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಬಳಿಕ ಸಂಸತ್ತಿನ ಮೊದಲ ಅಧಿವೇಶನಕ್ಕೆ ಸೋಮವಾರ ರಾಜಧಾನಿಯಲ್ಲಿ ಸಂಸದರು ಸೇರಬೇಕಾಗಿತ್ತು. ಇತ್ತೀಚೆಗೆ ಮಿಲಿಟರಿ ಬಗ್ಗೆ ನೀಡಿರುವ ಹೇಳಿಕೆಯಿಂದಾಗಿ ಇಂದಿನ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು, ಸ್ಥಳೀಯ ಸಂಪುಟ ಸದಸ್ಯರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.
ದೇಶದಲ್ಲಿ ಮಿಲಿಟರಿ ಆಡಳಿತ ವಿರುದ್ಧ ಸತತ ಹೋರಾಟ ನಡೆಸಿಕೊಂಡು ಬಂದು ದೇಶದ ನಾಯಕಿಯಾಗಿದ್ದವರು 75 ವರ್ಷದ ಅಂಗ್ ಸಾನ್ ಸೂಕಿ.
ಕಳೆದ ವರ್ಷ ನವೆಂಬರ್ ನಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಮ್ಯಾನ್ಮಾರ್ ಸಂಸತ್ತಿನ 642 ಸ್ಥಾನಗಳ ಪೈಕಿ ಆಂಗ್ ಸಂಗ್ ಸೂಕಿ ನೇತೃತ್ವದ ಎನ್‍ಎಲ್‍ಡಿ ಪಕ್ಷ 396 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿತ್ತು.
ಮ್ಯಾನ್ಮಾರ್ ನಲ್ಲಿ ನಡೆದ ಹಠಾತ್ ಬೆಳವಣಿಗೆಗೆ ಭಾರತ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಕಳವಳ ವ್ಯಕ್ತಪಡಿಸಿವೆ.

