ನವದೆಹಲಿ: ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡುವ ಸ್ವಯಂ ಘೋಷಿತ ನೀತಿಯನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ.
ಸ್ವಂತ ಬಳಕೆಯ 20 ವರ್ಷ ಹಳೆಯ ವಾಹನಗಳು ಹಾಗೂ ವಾಣಿಜ್ಯ ಬಳಕೆಯ 15 ವರ್ಷಗಳ ಹಳೆಯ ವಾಹನಗಳನ್ನು ಮಾಲೀಕರೇ ನಾಶ ಮಾಡಲು ನಿರ್ಮಲಾ ಸೀತಾರಾಮನ್ ಸಲಹೆ ನೀಡಿದರು.
ಇದಕ್ಕಾಗಿ ವಿಶೇಷ ಯೋಜನೆಯನ್ನು ಇಲಾಖೆವತಿಯಿಂದ ಪ್ರತ್ಯೇಕವಾಗಿ ಘೋಷಿಸುವುದಾಗಿ ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಹಳೆಯ ವಾಹನಗಳನ್ನು ನಾಶಪಡಿಸಿರುವುದರಿಂದ ಇಂಧನ ಕ್ಷಮತೆ, ವಾಯುಮಾಲಿನ್ಯ ನಿಯಂತ್ರಣ ಆಗಲಿದೆ. ತೈಲ ಆಮದನ್ನು ಕಡಿಮೆ ಮಾಡಬಹುದು. ಈ ಮೂಲಕ ಆರ್ಥಿಕತೆ ಸುಧಾರಣೆಯಾಗಲಿದೆ ಕೇಂದ್ರ ಆರ್ಥಿಕ ಸಚಿವರು ಹೇಳಿದರು.
ಹಳೆ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲು ನೀತಿ -ನಿರ್ಮಲಾ ಸೀತಾರಾಮನ್

