ನವದೆಹಲಿ: ಕೇಂದ್ರ ಬಜೆಟ್ ನ ಮುಖ್ಯಾಂಶಗಳು ಹೀಗಿವೆ.
ಕೊರೊನಾ ಸಂಕಷ್ಟದ ನಡುವೆಯೂ ಬಂಡವಾಳ ವೆಚ್ಚ ಶೇ. 34.5ರಷ್ಟು ಹೆಚ್ಚಳ
ಹೆದ್ದಾರಿಗಳ ಅಭಿವೃದ್ಧಿಗೆ 1.18 ಕೋಟಿ
ಬೆಂಗಳೂರು ಮೆಟ್ರೋ ರೈಲು ಯೋಜನೆಗೆ 14 ಸಾವಿರ ಕೋಟಿ ಮೀಸಲು
2023ರ ವೇಳೆಗೆ ಎಲ್ಲಾ ರೈಲು ಮಾರ್ಗಗಳ ವಿದ್ಯುದ್ದೀಕರಣ
ಪಿಂಚಣಿ ಹಾಗೂ ಠೇವಣಿ ಮೇಲಿನ ಬಡ್ಡಿ ಹಣ ಪಡೆಯುವ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೆರಿಗೆ ಪಾವತಿಸುವಂತಿಲ್ಲ
ಹತ್ತಿ, ಕಚ್ಚಾ ರೇಷ್ಮೆ ಮೇಲೆ ಕಸ್ಟಮ್ಸ್ ಸುಂಕ ಏರಿಕೆ
ಸ್ಟಾರ್ಟ್ ಅಪ್ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನು ಒಂದು ವರ್ಷ ಮುಂದೂಡಲಾಗಿದೆ.
ವಿದೇಶಿ ಬಟ್ಟೆಗಳ ಮೇಲಿನ ಕಸ್ಟಮ್ಸ್ ಶುಲ್ಕ ಏರಿಕೆ
ಚಿನ್ನ ಮತ್ತು ಬೆಳ್ಳಿಯ ಕಸ್ಟಮ್ಸ್ ಶುಲ್ಕ ಹಿಂದಿನ ದರಕ್ಕ ಇಳಿಕೆ
ಮೊಬೈಲ್ ಬಿಡಿಭಾಗಗಳ ಆಮದಿಗೆ ಕಸ್ಟಮ್ ಸುಂಕ ಕಡಿತ.
ಮುಂಬರುವ ಜನಗಣತಿ ಭಾರತದ ಇತಿಹಾಸದಲ್ಲಿ ಮೊದಲ ಡಿಜಿಟಲ್ ಜನಗಣತಿಯಾಗಿದೆ. ಈ ಕಾರ್ಯಕ್ಕಾಗಿ 3,768 ಕೋಟಿ ಮೀಸಲು
ಜಿಎಸ್ ಟಿಯಲ್ಲಿ 400 ಹಳೇಯ ಮತ್ತು ಅಪ್ರಸ್ತುತ ತೆರಿಗೆಗಳನ್ನು ತೆಗೆದು ಹಾಕಲಾಗಿದೆ.
ಗೃಹ ಸಾಲದ ತೆರಿಗೆ ವಿನಾಯತಿ ಒಂದು ವರ್ಷ ವಿಸ್ತರಣೆ
ಎನ್ ಆರ್ ಐಗಳಿಗೆ ಎರಡು ಕಡೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ
5 ಕೋಟಿ ವಹಿವಾಟು ನಡೆಸುವ ಚಾರಿಟೆಬಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯಿತಿ
ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಯೋಜನೆಗಾಗಿ 1,500 ಕೋಟಿ ರೂ. ನಿಗಧಿ
ರಾಷ್ಟ್ರೀಯ ನರ್ಸಿಂಗ್ ಮತ್ತು ಮಿಡ್‍ವೈಫರಿ ಆಯೋಗದ ಮಸೂದೆ ಪರಿಚಯಿಸಲು ಸರ್ಕಾರ ಪ್ರಸ್ತಾಪ
ಭಾರತ್ ಜಪಾನ್ ನಡುವೆ ಕೌಶಲ್ಯ ಅಭಿವೃದ್ದಿ ಒಪ್ಪಂದ.
ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ.
100 ಸೈನಿಕ್ ಶಾಲೆಗಳ ನಿರ್ಮಾಣಕ್ಕೆ ಒತ್ತು
ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿ
ಹೈಡ್ರೋಜನ್ ಎನರ್ಜಿ ಮಿಷನ್ ಪ್ರಾರಂಭಿಸಲು ಸರ್ಕಾರ ಪ್ರಸ್ತಾಪ.
ಭತ್ತ ಬೆಳೆಗಾರರಿಗೆ 1 ಲಕ್ಷದ 72 ಸಾವಿರ ಕೋಟಿ ರೂ ಅನುದಾನ ಬಿಡುಗಡೆ
ಧಾನ್ಯ ಖರೀದಿಗೆ 10,500 ಕೋಟಿ ರೂಪಾಯಿ ಅನುದಾನ ಮೀಸಲು
ಪಶುಸಂಗೋಪನೆ, ಮೀನುಗಾರಿಕೆಗೆ 40 ಸಾವಿರ ಕೋಟಿ
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧಾರ
ಮೊಬೈಲ್, ಟಿವಿ, ಫ್ರಿಡ್ಜ್ ಬೆಲೆ ಏರಿಕೆ.
ಚರ್ಮದ ಉತ್ಪನ್ನಗಳ ಆಮದು ಸುಂಕ ಏರಿಕೆ
ಸ್ಟೀಲ್, ತಾಮ್ರ, ಪೈಂಟ್ ಅಗ್ಗ. ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ
ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ನ್ನು 7,400 ಯೋಜನೆಗಳಿಗೆ ವಿಸ್ತರಣೆ

