ಆತ್ಮ ಬರ್ಬಾದ್ ಬಜೆಟ್ -ಸಿದ್ದರಾಮಯ್ಯ

ಬೆಂಗಳೂರು: ಆತ್ಮ ಬರ್ಬಾದ್ ಬಜೆಟ್ ಇದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಂಡಿಸಿದ ಬಜೆಟ್ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ವಿಪಕ್ಷ ನಾಯಕ ಸಿದ್ಧರಾಮಯ್ಯ, ಇದು ಯಾವುದೇ ಚೇತರಿಗೆ, ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ಆಗಿದೆ ಎಂದಿದ್ದಾರೆ.
ಇದೊAದು ಆತ್ಮ ಬರ್ಬಾದ್ ಬಜೆಟ್ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಮೊದಲು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ ಎಂದಿದ್ದೆ. ನಾನು ಹೇಳಿದ ಮಾತು ಸತ್ಯವಾಗಿದೆ. ಅದರಂತೆಯೇ ಬಜೆಟ್ ಮಂಡಿಸಿದ್ದಾರೆ. ಆತ್ಮನಿರ್ಭರದ ಮೂರು ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ, ಅವರು ಆತ್ಮ ಬರ್ಬಾದ್ ಬಜೆಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಕೋವಿಡ್ ನಿಂದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿತ್ತು. ಅದನ್ನ ಚೇತರಿಕೆ ಮಾಡುತ್ತಾರೆಂದು ಕೊಂಡಿದ್ದೇವು, ಆದರೆ, ಆ ರೀತಿಯ ಯಾವ ನಿರೀಕ್ಷೆಯೂ ಈಡೇರಿಸಿಲ್ಲ ಎಂದಿದ್ದಾರೆ.