ಪಾಕ್ ಮೇಲೆ ಇರಾನ್ ನಿಂದ ಸರ್ಜಿಕಲ್ ಸ್ಟ್ರೈಕ್

ಟೆಹ್ರಾನ್: ಇರಾನ್ ವಾಯುಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನದ ಗಡಿಯೊಳಗೆ ಇರಾನ್ ವಾಯುಪಡೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.
ಇರಾನ್ ಸೇನೆ ತನ್ನ ಇಬ್ಬರು ಯೋಧರ ರಕ್ಷಣೆಗೆ ಕಳೆದ ರಾತ್ರಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಲೂಚಿಸ್ತಾನದೊಳಗೆ ನುಗ್ಗಿ ಜೈಶ್ ಉಲ್ ಅದ್ ಉಗ್ರ ನೆಲೆಗಳ ಮೇಲೆ ದಾಳಿ ಮಾಡಿ ತನ್ನ ಯೋಧರನ್ನು ರಕ್ಷಿಸಿರುವುದಾಗಿ ವರದಿ ಆಗಿದೆ.
ದಾಳಿಯಲ್ಲಿ ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ.
ಪಾಕ್ ಸೇನೆಗೆ ಸುಳಿವು ಸಿಗದಂತೆ ಇರಾನ್ ಸೇನೆ ಕಾರ್ಯಾಚರಣೆ ನಡೆಸಿದೆ.
ರಾನ್ ನ ರೆವಲ್ಯೂಷನರಿ ಪಡೆ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಮೇರೆಗೆ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ.
ಭಾರತದ ನಂತರ ಇರಾನ್ ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ.