ಬಳ್ಳಾರಿ ಜಿಲ್ಲೆ ವಿಭಜನೆ: ವಿಜಯನಗರ ಜಿಲ್ಲೆ ಘೋಷಿಸಿದ ಸರಕಾರ

ಬಳ್ಳಾರಿ: ಜಿಲ್ಲೆಯ ಹಲವರ ವಿರೋಧದ ನಡುವೆಯೂ ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ಅಂತಿಮವಾಗಿ ವಿಜಯನಗರ ಜಿಲ್ಲೆ ರಚನೆಗೆ ಸೋಮವಾರ ಅಂತಿಮವಾಗಿ ಅಧಿಸೂಚನೆ ಹೊರಡಿಸಿದೆ.
ನೂತನ ಜಿಲ್ಲೆಯಲ್ಲಿ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿಗಳನ್ನು ತಾಲೂಕುಗಳಾಗಿ ಸೇರ್ಪಡೆಗೊಳಿಸಲಾಗಿದೆ.
ರಾಜ್ಯದ 31ನೇ ಜಿಲ್ಲೆ ವಿಜಯನಗರಕ್ಕೆ ರಾಜ್ಯ ಸಚಿವ ಸಂಪುಟ ಕಳೆದ ವಾರ ಅನುಮೋದನೆ ನೀಡಿತ್ತು.್ತ
ಹೀಗಾಗಿ ಮುಖ್ಯಮಂತ್ರಿ ಸೋಮವಾರ ತಮ್ಮ ಸಂಪುಟದ ಈ ನಿರ್ಧಾರವನ್ನು ಕಾನೂನಾತ್ಮಕವಾಗಿ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಎಲ್ಲರ ಅನುಮತಿಯೊಂದಿಗೆ ಇದೀಗ ಹೊಸ ಜಿಲ್ಲೆಯನ್ನು ಘೋಷಿಸಲಾಗಿದೆ.
ಹೊಸ ಜಿಲ್ಲೆ ಬಗ್ಗೆ ರಾಜ್ಯಪತ್ರದಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲೀಗ ಒಟ್ಟ 31 ಜಿಲ್ಲೆಗಳಾದಂತಾಗಿದೆ. ಈ ಮೂಲಕ ಸಚಿವ ಆನಂದ್ ಸಿಂಗ್ ಅವರ ಬಹುದಿನಗಳ ಕನಸು ನನಸಾದಂತಾಗಿದೆ.