ವಾಲ್ಮೀಕಿ ಪೀಠ ಸ್ವಾಮೀಜಿ ಹಾಗೂ ಸಿಎಂ ನಡುವೇ ಮಾತಿನ ಚಕಮಕಿ (ವಿಡಿಯೋ)

ದಾವಣಗೆರೆ: ವಾಲ್ಮೀಕಿ ಪೀಠ ಪ್ರಸನ್ನಾನಂದ ಪುರಿ ಶ್ರೀ ಹಾಗೂ ಸಿಎಂ ಬಿ. ಎಸ್. ಯಡಿಯೂರಪ್ಪನವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಈ ಘಟನೆ ದಾವಣಗೆರೆ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆಯಿತು.
ಮಾ. 9ರ ಒಳಗೆ ಮೀಸಲಾತಿ ಬೇಡಿಕೆ ಈಡೇರಿಸಿ, ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ವಾಲ್ಮೀಕಿ ಪೀಠ ಪ್ರಸನ್ನಾನಂದ ಪುರಿ ಶ್ರೀ ಸಿಎಂಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಎಂ ಹಾಗೂ ಶ್ರೀಗಳ ನಡುವೆ ಮಾತಿನ ಚಕಮಕಿ ನಡೆಯಿತು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿ, ಬಿಎಸ್ ವೈ ಮಾತು ಕೊಟ್ರೆ ತಪ್ಪಲ್ಲ ಎಂಬ ನಂಬಿಕೆ ಹೆಚ್ಚಾಗಿತ್ತು. ಯಾಕೆ ವಿಳಂಬ ಮಾಡ್ತಿದ್ದೀರೋ ಗೊತ್ತಿಲ್ಲ, ಮೀಸಲಾತಿ ಹೆಚ್ಚಳವಾದರೆ ಸಿಎಂ ಗೆ ಕೃತಜ್ಞತೆ. ಇಲ್ಲವಾದರೆ ಆಮರಣಾಂತ ಉಪವಾಸ ಮಾಡುತ್ತೇನೆ. ನಾನೇನದರು ಸತ್ತರೆ, ಎಂದಾಕ್ಷಣ ಸಿಎಂ ಯಡಿಯೂರಪ್ಪನವರು ಮಧ್ಯ ಪ್ರವೇಶಿಸಿ ಈ ರಿತಿ ಮಾತನಾಡ ಬೇಡಿ ಎಂದು ಸ್ವಾಮೀಜಿ ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಆಯಿತು.
ಬಳಿಕ ಮತ್ತೆ ಭಾಷಣ ಮುಂದುವರಿಸಿದ ಶ್ರೀಗಳು, ಈ ಹೋರಾಟದಲ್ಲಿ ನನ್ನ ಸ್ವಾರ್ಥವಿಲ್ಲ ಎಂದಾಕ್ಷಣ ಸಿಎಂ ಮೀಸಲಾತಿ ಹೆಚ್ಚಿಸುವ ಬಗ್ಗೆ ಆಶ್ವಾಸನೆ ನೀಡಿದ ಬಳಿಕ ಹೋರಾಟ ಹಾಗೂ ಸಾವಿನ ಹೇಳಿಕೆಯನ್ನು ವಾಲ್ಮೀಕಿ ಶ್ರೀ ವಾಪಾಸ್ ಪಡೆದರು. ಸಾಮಾಜಿಕ ನ್ಯಾಯ ಒದಗಿಸುವಂತೆ ಶ್ರೀಗಳು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಸರ್ಕಾರ ವಿಳಂಬ ಮಾಡುತ್ತಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ ಮತ್ತೆ ಹೋರಾಟ ಆರಂಭಿಸುವುದಾಗಿ ಮುಖ್ಯಮಂತ್ರಿಗಳಿಗೆ ಶ್ರೀಗಳು ಎಚ್ಚರಿಕೆ ನೀಡಿದರು.