ಮೈಸೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಸ್ಥಾನ ಇದೀಗ ಜೆಡಿಎಸ್-ಕಾಂಗ್ರೆಸ್ ಪಾಲಾಗಿದೆ.
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟ ಜೆಡಿಎಸ್ ಅಭ್ಯರ್ಥಿಗೆ ಒಲಿದಿದೆ.
ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್‍ನ ಅಫ್ತಾಬ್ ಅವರಿಗೆ ಉಪಮೇಯರ್ ಸ್ಥಾನ ಲಭಿಸಿದೆ.
ಜೆಡಿಎಸ್‍ನ ರುಕ್ಮಿಣಿ ಮಾದೇಗೌಡ ಅವರು 43 ಮತಗಳನ್ನು ಪಡೆಯುವ ಮೂಲಕ ಮೈಸೂರು ಮೇಯರ್ ಆಗಿ ಆಯ್ಕೆ ಆಗಿದ್ದಾರೆ.
ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನು ಈ ಭಾರಿ ಹಿಡಿಯಲಿದೆ ಎಂಬ ವಿಶ್ವಾಸವಿತ್ತು.
ಆದರೆ ಕೊನೆಗಳಿಗೆಯಲ್ಲಿ ಆದ ಬೆಳವಣಿಗೆಯಿಂದ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿದಿದೆ.
ಬಿಜೆಪಿ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಡಿದ್ದ ಎಲ್ಲ ಕಸರತ್ತು ವ್ಯಥ್ರ್ಯವಾಗಿದೆ.

