ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ ನೂತನ ಮೇಯರ್‍ಗೆ ಸಂಕಷ್ಟ ಎದುರಾಗಿದೆ.
ಪಾಲಿಕೆ ಸದಸ್ಯತ್ವ ರದ್ದಾಗುವ ಅಗ್ನಿ ಪರೀಕ್ಷೆ ಮೈಸೂರಿನ ನೂತನ ಮೇಯರ್ ಆಗಿರುವ ರುಕ್ಮಿಣಿ ಮಾದೇಗೌಡ ಅವರಿಗೆ ಎದುರಾಗಿದೆ.
ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಹೈಕೋರ್ಟ್ ನಲ್ಲಿ ಗುರುವಾರ ವಿಚಾರಣೆ ನಡೆಯಲಿದೆ.
ಮೈಸೂರಿನ ವಾರ್ಡ್ ನಂ. 36ರ ಪಾಲಿಕೆ ಸದಸ್ಯೆ ಆಗಿರುವ ರುಕ್ಮಿಣಿ ಮಾದೇಗೌಡ ಅವರು ಚುನಾವಣೆ ವೇಳೆ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಮಾಡಲಾಗಿದೆ.
ಕಾಂಗ್ರೆಸ್ ಕಾಪೆರ್Çೀರೇಟರ್ ರಜಿನಿ ಅಣ್ಣಯ್ಯ ಅವರು ರುಕ್ಮಿಣಿ ಮಾದೇಗೌಡ ವಿರುದ್ಧ ಈ ಬಗ್ಗೆ ದೂರು ಸಲ್ಲಿಸಿದ್ದರು.
ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ದೂರಿನ ಬಗ್ಗೆ ವಿಚಾರಣೆ ನಡೆಸಿ 2020ರ ಡಿ. 14ರಲ್ಲಿ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದು ಮಾಡಿ ನ್ಯಾಯಾಲಯ ಆದೇಶಿಸಿತ್ತು.
ರುಕ್ಮಿಣಿ ಮಾದೇಗೌಡ ಬದಲಾಗಿ ರಜಿನಿ ಅಣ್ಣಯ್ಯ ಚುನಾಯಿತ ಸದಸ್ಯೆ ಎಂದು ನ್ಯಾಯಾಲಯ ಘೋಷಿಸಿ ಆದೇಶ ನೀಡಿತ್ತು.
ರಜಿನಿ ಅಣ್ಣಯ್ಯ ಅವರಿಗೆ ಪ್ರಮಾಣ ಪತ್ರ ನೀಡುವಂತೆಯೂ ಕೋರ್ಟ್ ಸೂಚಿಸಿತ್ತು.
ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರುಕ್ಷ್ಮಿಣಿ ಮಾದೇಗೌಡ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಮೇಯರ್ ಆಗಿರುವ ರುಕ್ಷ್ಮಿಣಿ ಮಾದೇಗೌಡ ಅವರ ಸದಸ್ಯತ್ವ ಕುರಿತಂತೆ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ಗುರುವಾರ ಅರ್ಜಿ ವಿಚಾರಣೆ ನಡೆಯಲಿದೆ.
ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ರುಕ್ಮುಣಿಗೆ ಸಂಕಷ್ಟ ಎದುರಾಗಿದೆ.
ತಪ್ಪು ಅಫಿಡೆಡವಿಟ್ ಸಾಬೀತಾದರೆ ರುಕ್ಮಿಣಿ ಮಾದೇಗೌಡ ಅವರು ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.

