ಡಿಜಿಟಲೀಕರಣ ಯುಗದಲ್ಲಿಯೂ ಮಹಿಳೆ ಶೋಷಣೆಯಿಂದ ಮುಕ್ತವಾಗಿಲ್ಲ

ಡಾ.ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com


ವಿಶ್ವಸಂಸ್ಥೆಯು ಮಹಿಳಾ ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಯ ಉದ್ದೇಶವನ್ನು ಮುಖ್ಯವಾಗಿ ಪರಿಗಣಿಸಿ, 1970ರಲ್ಲಿ ತನ್ನ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಮಹಿಳಾ ಸ್ಥಾನಮಾನದ ಸ್ಥಿತಿಗತಿಯನ್ನು ಅರಿಯಲು ಅಧ್ಯಯನ ಮಾಡಿ ವರದಿ ಸಲ್ಲಿಸಲು ಆದೇಶಿಸಿತು.
ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ಭಾರತ ದೇಶವು “ಸಮಾನತೆಯಡೆಗೆ” ವರದಿಯನ್ನು ಸಲ್ಲಿಸಿತು.
ತನ್ನ ಎಲ್ಲ ಸದಸ್ಯ ರಾಷ್ಟ್ರಗಳಲ್ಲಿಯೂ ಮಹಿಳೆಯರಿಗೆ ಸ್ಥಿತಿ ಗತಿ ಅಸಮಾನತೆ ಅಡಿಯಲ್ಲಿ ಇತ್ತು. ಪ್ರಪಂಚದ ಮಾನವ ಸಂಪನ್ಮೂಲ ಲಿಂಗ ಅಸಮಾನತೆಯ ಮೌಢ್ಯತೆಯ ಅಡಿಯಲ್ಲಿ ಬದುಕುತ್ತಿರುವುದರಿಂದ, ಅದರ ಪರಿಣಾಮ ದೇಶದ ಅಭಿವೃದ್ಧಿಗೆ ಮಾರಕ ಉಂಟಾಗುತ್ತಿದೆ ಎಂಬ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆಯು 1975ನೇ ವರ್ಷವನ್ನು ಮಹಿಳಾ ವರ್ಷವಾಗಿ ಘೋಷಿಸಿತು.
ಅದರ ಫಲಶೃತಿಯಾಗಿ, ಲಿಂಗ ಸಮಾನತೆಯನ್ನು ಸಾಧಿಸಲು ಹಾಗೂ ಶಾಂತಿ ಸ್ಥಾಪನೆಗಾಗಿ 1975 ಮಾರ್ಚ್ 8 ಅಂತರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲಾಗುತ್ತದೆ.
ಉದಾರೀಕರಣ, ಡಿಜಿಟಲೀಕರಣ ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಅನುಕೂಲತೆ ಪಡೆದಿದ್ದರೂ, ಜಗತ್ತಿನಾದ್ಯಂತ ಸಾಧನೆ ತೋರಿದರೂ ಶೋಷಣೆಯಿಂದ ಇನ್ನೂ ಮುಕ್ತವಾಗಿಲ್ಲ.
2011ರ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ 6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣುಮಕ್ಕಳಿದ್ದಾರೆ. ಹುಟ್ಟಿದ 12 ಮಿಲಿಯನ್ ಹೆಣ್ಣು ಮಕ್ಕಳಲ್ಲಿ, 3 ಮಿಲಿಯನ್ ಮಕ್ಕಳು ತಮ್ಮ 15 ನೆಯ ಹುಟ್ಟು ಹಬ್ಬವನ್ನು ಕಾಣುವುದಿಲ್ಲ. 1 ಮಿಲಿಯನ್ ಹೆಣ್ಣು ಮಕ್ಕಳು ಹುಟ್ಟಿದ ಮೊದಲ ವರ್ಷದೊಳಗೇ ಕಾಣೆಯಾಗುತ್ತಾರೆ. ಪ್ರತಿ 6ನೇ ಹೆಣ್ಣು ತಾನು ಹೆಣ್ಣೆಂಬ ಕಾರಣಕ್ಕೆ ಕೊಲ್ಲಲ್ಪಡುತ್ತಾಳೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಣ್ಣಿಗೆ ಈಗಲೂ ರಕ್ಷಣೆಯಿಲ್ಲ.
ಹೆಣ್ಣಿನ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಭ್ರೂಣ ಹತ್ಯೆ, ಅನಕ್ಷರತೆ, ಕಿರುಕುಳ, ತಾರತಮ್ಯ, ಅವಮಾನ, ಅಗೌರವ, ಅತ್ಯಾಚಾರ ಮೊದಲಾದ ಅನ್ಯಾಯಗಳು ಹತೋಟಿಗೆ ಬರಬೇಕಾದರೆ, ಅವಳಿಗೆ ಬಾಲ್ಯದಿಂದಲೇ ತನ್ನ ಅಧಿಕಾರ, ಹಕ್ಕುಗಳ ಅರಿವಿರ ಬೇಕಾಗುತ್ತದೆ.
ಈ ಅರಿವು ಮೂಡಿಸುವ ಜವಾಬ್ದಾರಿ ಪೆÇೀಷಕರದ್ದು.
ಮಾನವ ಸಂಪನ್ಮೂಲದಲ್ಲಿ ಸುಮಾರು ಅರ್ಧ ಪಾಲು ಹೆಣ್ಣುಗಳದ್ದು. ಆದರೆ, ಶಾಲಾ ಕಲಿಕೆಯಲ್ಲಿ ಅವಕಾಶ ವಂಚಿತಳಾಗಿರುವುದರಿಂದ ಅವಳ ಸಾಮಾಜಿಕ ಬೆಳವಣಿಗೆಯ ಗತಿಯೂ ಕುಂದಿದೆ.
ಹೆಣ್ಣೊಬ್ಬಳು ತನ್ನ ಶಕ್ತಿ ಸಾಮಥ್ರ್ಯಗಳ ಬಲದಿಂದ ಬದುಕಬೇಕು ಹಾಗೂ ಎಲ್ಲ ಅಡ್ಡಿ ಆತಂಕಗಳನ್ನು ಸ್ವತಃ ನಿಭಾಯಿಸಿ ಕೊಳ್ಳಬೇಕಾದರೆ ಅವಳು ಶಿಕ್ಷಿತಳಾಗಬೇಕು.
ಹೆಣ್ಣು ಮಕ್ಕಳೆಲ್ಲ ಶಿಕ್ಷಿತರಾದಾಗ ಮಾತ್ರ, ಸಂವಿಧಾನದ ಕಲ್ಪನೆಯ ಭಾರತವನ್ನು ನಾವು ತಲುಪಲು ಸಾಧ್ಯ.
ಪ್ರತಿ ವರ್ಷವೂ ಕೂಡ ಹೊಸ ಹೊಸ ಆಯಾಮ ಚಿಂತನೆಗಳನ್ನು ಹೊರತರುವ ಜೊತೆಯಲ್ಲಿ 1996 ಮಹತ್ವದ ವಿಷಯ ಆಧಾರದ ಮೇಲೆ ಆಚರಿಸಲಾಗುತ್ತದೆ.
ಈ ಮೂಲಕ ಪ್ರತಿವರ್ಷವೂ ಮಹಿಳಾ ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಪೂರಕವಾದ ಥೀಮ್ ನ್ನು ನಿರ್ಣಯಿಸಿ ಅದರ ಅಭಿವೃದ್ಧಿಗೆ ಶ್ರಮವಹಿಸುತ್ತಿದೆ. ಈ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಗೊಂಡು ಬರುತ್ತಿದೆ.
“Women in leadership: Achieving an equal future in a COVID-19 world” (“ಮಹಿಳೆಯರು ನಾಯಕತ್ವ: COVID-19 ಜಗತ್ತಿನಲ್ಲಿ ಸಮಾನ ಭವಿಷ್ಯವನ್ನು ಸಾಧಿಸುವುದು”) 2021 ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಷಯವಾಗಿದೆ “ಮಹಿಳೆಯ ನಾಯಕತ್ವ’ ದಲ್ಲಿ ಸಮಾನತೆಗಾಗಿ ಹೋರಾಡೋಣ, ಸಮಾನತೆಯ ಮನೋಭಾವದ ಜಗತ್ತನ್ನು ಕಟ್ಟೋಣ ಎನ್ನುವುದು ಧೇಯ್ಯವಾಗಿದೆ.
ಕಳೆದ ವರ್ಷ ಕೋವಿಡ್ ನಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿತ್ತು. ಅದರಲ್ಲಿ ದುಡಿಯುವ, ಸಾಂಸಾರಿಕ ಜವಾಬ್ದಾರಿ ಹೊತ್ತಿದ್ದ ಮಹಿಳೆಯರು ತಮ್ಮ ಮನೆ ಸಂಸಾರವನ್ನು ಅತ್ಯಂತ ಸಮರ್ಪಕವಾಗಿ ನಡೆಸಿದರು. ಜೊತೆಗೆ ಇದೇ ಸಂದರ್ಭದಲ್ಲಿ ಮಹಿಳೆಯರ ಮೇಲಿನ ಮಾನಸಿಕ, ದೈಹಿಕ ದೌರ್ಜನ್ಯಗಳು, ಬಾಲ್ಯ ವಿವಾಹದಂತಹ ಶತಮಾನಗಳ ಹಿಂದೆ ನೂಕುವ ಅನೇಕ ಪ್ರಕರಣಗಳು ಅತಿ ಹೆಚ್ಚಾಗಿಯೇ ಕಂಡು ಬಂದವು, ಇವೆಲ್ಲವುಗಳನ್ನು ಮೀರಿ ಬದುಕು ಕಟ್ಟಿಕೊಳ್ಳವ ಅಕೆಯ ಮನಸ್ಥಿತಿಗೆ ಸಾವಿರ ಕೋಟಿ ನಮನಗಳು,
ಜಗತ್ತಿನ ಎಲ್ಲ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು.