ಮುಂಬೈ: ನಟ ಸೋನು ಸೂದ್‍ಗೆ ಖಾಸಗಿ ವಿಮಾನ ಸಂಸ್ಥೆಯೊಂದು ಗೌರವ ಸೂಚಿಸಿದೆ.
ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸೋನು ಸೂದ್ ತೊಂದರೆಗೊಳಗಾದವರಿಗೆ ಮಾಡಿದ ಸಹಾಯ ಮೆಚ್ಚಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ವಿಶೇಷ ಗೌರವ ಸಲ್ಲಿಸಿದೆ.
ಸ್ಪೈಸ್ ಜೆಟ್ ಬೋಯಿಂಗ್-737 ವಿಮಾನ ಮೇಲೆ ಸೋನು ಸೂದ್ ಅವರ ಭಾವಚಿತ್ರ ಹಾಕಿ ಸೋನು ಸೂದ್‍ಗೆ ಸೆಲ್ಯೂಟ್ ಎಂದು ವಿಮಾನದ ಮೇಲೆ ಬರೆಯಲಾಗಿದೆ.
ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಸೋನು ಸೂದ್ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯವನ್ನು ಮೆಚ್ಚಿ ಖಾಸಗಿ ವಿಮಾನ ಸಂಸ್ಥೆಯೊಂದು ವಿಮಾನದ ಮೇಲೆ ಸೋನು ಅವರ ಭಾವಚಿತ್ರ ಹಾಕಿ ಗೌರವ ಸಲ್ಲಿಸಿದೆ.
ಈ ಸಂತೋಷವನ್ನು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.
ಸೋನು ಟ್ವೀಟ್‍ಗೆ ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಕಾಜಲ್ ಅಗರ್ವಾಲ್ ಸೇರಿದಂತೆ ಅನೇಕ ನಟ ನಟಿಯರು, ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ.

