ಸುಧಾಕರ್ ಸೇರಿ 6 ಸಚಿವರ ವಜಾಕ್ಕೆ ಮಹಿಳಾ ಕಾಂಗ್ರೆಸ್, ಶಾಸಕಿಯರ ಆಗ್ರಹ

ಬೆಂಗಳೂರು: ಸಿಡಿ ಪ್ರಕರಣದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ತಮ್ಮ ಹೆಗಲು ತಾವೇ ಮುಟ್ಟುಕೊಂಡಿರುವ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತಿರುವ 6 ಸಚಿವರು ತಮ್ಮ ಸ್ಥಾನದ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್‍ಮುಖಂಡರು, ಶಾಸಕಿಯರು ಒಕ್ಕೊರಳಿನಿಂದ ಒತ್ತಾಯಿಸಿದ್ದಾರೆ.
ಸಚಿವ ಸುಧಾಕರ್ ಅವರ ಹೇಳಿಕೆ ಕುರಿತು ಗುರುವಾರ ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುμÁ್ಪ ಅಮರನಾಥ್ ಹಾಗೂ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯಾರೆಡ್ಡಿ, ಕುಸುಮಾ ಶಿವಳ್ಳಿ ಹಾಗೂ ರೂಪಾ ಶಶಿಧರ್ ಅವರು ಜಂಟಿ ಸುದ್ದಿಗೋಷ್ಠಿಗೋಷ್ಠಿ ನಡೆಸಿದರು.
ಈ ವೇಳೆ ಮಾತನಾಡಿದ ಪುμÁ್ಪ ಅಮರನಾಥ್ ಅವರು, ಸಿಡಿ ಪ್ರಕರಣದಲ್ಲಿ 6 ಸಚಿವರುಗಳು ತಡೆಯಾಜ್ಞೆ ತರುವ ಮೂಲಕ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸೇರಿದಂತೆ ನಮ್ಮ ಪಕ್ಷದ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಇವರು ನೈತಿಕತೆ, ಯೋಗ್ಯತೆ ಕಳೆದುಕೊಂಡಿದ್ದು, ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು.
ಈ ಸಚಿವರನ್ನು ಶಾಸಕ ಸ್ಥಾನದಿಂದಲೇ ವಜಾ ಮಾಡಬೇಕು ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್: ಸುಧಾಕರ್ ಅವರ ಹೇಳಿಕೆ ಪಕ್ಷತೀತವಾಗಿ ಇಡೀ ರಾಜಕಾರಣ ಕುಟುಂಬಕ್ಕೆ ದೊಡ್ಡ ಅಪಮಾನ ಮಾಡಲಾಗಿದೆ. ಬಾಯಿ ಬಿಟ್ಟರೆ ರಾಮನ ಜಪ ಮಾಡುವ ಪಕ್ಷದಲ್ಲಿ ಈ ರೀತಿ ಮಾತನಾಡಲು ಅವರಿಗೆ ಅವಕಾಶ ಮಾಡಿಕೊಟ್ಟವರು ಯಾರು? ಬಿಜೆಪಿಯ ನಾಯಕಿಯರಾದ ಶೋಭಾ ಕರಂದ್ಲಾಜೆ ಅವರಾಗಲಿ, ಶಶಿಕಲಾ ಜೊಲ್ಲೆ, ಭಾರತಿ ಶೆಟ್ಟಿ, ತೇಜಸ್ವಿನಿ, ಪೂರ್ಣಿಮಾ ಅವರಾಗಲಿ ಈ ಮಾತನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ಸಚಿವರು ಹಿಂದೂ ಸಂಸ್ಕøತಿಯ ಬಗ್ಗೆ ಅಪಮಾನ ಮಾಡಿದ್ದಾರೆ. ಬಿಜೆಪಿಯವರದ್ದು ಹಿಂದೂ ರಾಷ್ಟ್ರದ ಪರಿಕಲ್ಪನೆ. ಇದೇನಾ ಹಿಂದೂ ಸಂಸ್ಕೃತಿ ಎಂದವರು ಪ್ರಶ್ನಿಸಿದರು. ಇಡೀ ಮಹಿಳಾ ಕುಲಕ್ಕೆ ಮಾಡಿರುವ ಅಪಮಾನ ಇದು ಎಂದರು.
ರೂಪಾ ಶಶಿಧರ್: ಸಮಾಜಕ್ಕಾಗಿ ಶ್ರಮಿಸುವ ಸದನದ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಶಾಸನ ಸಭೆಗೆ ಮಾಡಿದ ಅಪಮಾನ. ಮಾಡಬಾರದ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ನೀಡಿದ್ದು, ಗೌರವಾನ್ವಿತ ಹುದ್ದೆಯಲ್ಲಿರುವವರಿಗೂ ಅಪಮಾನ ಮಾಡಿದ್ದಾರೆಂದರು.
ಸೌಮ್ಯರೆಡ್ಡಿ: ಈ ವಿಚಾರವಾಗಿ ನಾನು ವಿಧಾನಸೌಧಕ್ಕೆ ಹೋದಾಗ ಮಾಧ್ಯಮದವರು ಪ್ರಶ್ನೆ ಕೇಳಿದಾಗ ನನಗೆ ನಗಬೇಕೋ ಅಳಬೇಕೋ ತೋಚಲಿಲ್ಲ ಎಂದು ತಿಳಿಸಿದರು.
ಶಾಲೆಗಳಿಗೆ ಹೋದಾಗ ನಾನು ಮಕ್ಕಳನ್ನು ಏನಾಗುತ್ತೀರಾ ಎಂದು ಕೇಳಿದರೆ ಪೆÇೀಲೀಸ್, ಡಾಕ್ಟರ್ ಅಂತಾರೆ ರಾಜಕಾರಣಿ ಅಂತಾ ಯಾರೂ ಹೇಳುವುದಿಲ್ಲ ಎಂದರು.
ಎರಡು ವರ್ಷಗಳ ಹಿಂದೆ ನಮ್ಮ ಪಕ್ಷದಲ್ಲಿದ್ದವರೇ ತಾಯಿ ಪಕ್ಷಕ್ಕೆ ದ್ರೋಹ ಬಗೆದು ಹೋಗಿದ್ದರು. ಇದನ್ನೆಲ್ಲಾ ಜನ ನೋಡಿ ಬೇಸತ್ತಿದ್ದಾರೆ.
ನಾವೂ ಪ್ರತಿನಿತ್ಯ ಈ ಪುರುಷ ಪ್ರಧಾನ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜನಪ್ರತಿನಿಧಿ ಎಂದರೆ ಜನರ ಪರವಾಗಿ ನಿಲ್ಲುವವರು. ಈಗ ರಾಜಕಾರಣಿ ಎಂದರೆ ಜನ ನಗುತ್ತಿದ್ದಾರೆಂದರು.