ಯುವತಿಯಿಂದ 3ನೇ ವಿಡಿಯೋ ಬಿಡುಗಡೆ; ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಿದ್ದೇನೆ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದ ಯುವತಿ ಶುಕ್ರವಾರ 3ನೇ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ಮೂರನೇ ವಿಡಿಯೋದಲ್ಲಿ ಯವತಿ ಹೇಳಿದ್ದಾರೆ.
ಇಂದಿನ ವಿಡಿಯೋದಲ್ಲಿ, ನಾನು 24 ದಿನಗಳಿಂದ ಜೀವ ಭಯ, ಜೀವ ಬೆದರಿಕೆಯಲ್ಲಿದ್ದೆ. ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ರಾಜ್ಯದ ಜನರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ನನಗೆ ಧೈರ್ಯ ಬಂದಿದೆ. ರಮೇಶ್ ಜಾರಕಿಹೊಳಿ ವಿರುದ್ದ ದೂರು ನೀಡುತ್ತಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ವಕೀಲ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಿದ್ದೇನೆ ಎಂದು ಯವತಿ ವಿಡಿಯೋದಲ್ಲಿ ಹೇಳಿದ್ದಾರೆ.