ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ ಐಟಿ)ಕ್ಕೆ ವಹಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ವಕೀಲೆ ಗೀತಾ ಮಿಶ್ರಾ ಅವರು ಸೋಮವಾರ ಹೈಕೋರ್ಟ್‍ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ.
ಸರ್ಕಾರಿ ಗೆಜೆಟ್ ಆದೇಶವಿಲ್ಲದೆ ಎಸ್ ಐಟಿ ರಚನೆ ಮಾಡಲಾಗಿದ್ದು, ಇದು ಕಾನೂನು ಬಾಹಿರ. ಹೀಗಾಗಿ ಎಸ್ ಟಿಐ ರದ್ದುಗೊಳಿಸಬೇಕು ಎಂದು ಅವರು ಹೈಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಪೆÇಲೀಸ್ ಆಯುಕ್ತರು ರಚಿಸಿರುವ ಎಸ್‍ಐಟಿ ಕಾನೂನಿಗೆ ವಿರುದ್ಧವಾಗಿದೆ ಎಂದವರು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಪೆÇಲೀಸರಿಂದಲೇ ತನಿಖೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಗೀತಾ ಮಿಶ್ರಾ ಅವರು ಮನವಿ ಮಾಡಿದ್ದಾರೆ.
ಹಿರಿಯ ವಕೀಲ ಜಿ. ಆರ್. ಮೋಹನ್ ಅವರ ಮೂಲಕ ಗೀತಾ ಮಿಶ್ರಾ ಅವರು ಅರ್ಜಿ ದಾಖಲಿಸಿದ್ದಾರೆ.
ಸಿಡಿ ಪ್ರಕರಣ: ಎಸ್ ಐಟಿ ರದ್ದುಗೊಳಿಸಲು ಪಿಐಎಲ್ ಅರ್ಜಿ ಸಲ್ಲಿಕೆ

