ಶಬರಿಮಲೆ: ಇದೇ ಏಪ್ರಿಲ್ ತಿಂಗಳಲ್ಲಿ ಶಬರಿ ಮಲೈ ಅಯ್ಯಪ್ಪ ಸ್ವಾಮಿಗೆ ವಿಶೇಷ ಮಾಸಿಕ ಪೂಜೆ ನೆರನೇರಲಿದೆ.
ಮೇದಂ ಮಾಸದ ಪೂಜೆ ಹಾಗೂ ವಿಷುಕಾನಿ ದರ್ಶನದ ಪ್ರಯುಕ್ತ ಶ್ರೀ ಕ್ಷೇತ್ರ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಈ ತಿಂಗಳ 10ರಿಂದ 18ರವರೆಗೂ ತೆರೆಯಲಾಗುವುದು.
ಈ ಸಂದರ್ಭದಲ್ಲಿ ಭಕ್ತರು ಅಯ್ಯಪ್ಪ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅಯ್ಯಪ್ಪನ ದರ್ಶನ ಮಾಡಲು ಬರುವ ಭಕ್ತರು ಕೋವಿಡ್ ಆರ್‍ಟಿಪಿಸಿಆರ್ ನೆಗೆಟೀವ್ ಸರ್ಟಿಫಿಕೇಟ್ ಅಥವಾ ಕೋವಿಡ್ ವ್ಯಾಕ್ಷಿನ್ ಪಡೆದ ಪ್ರಮಾಣ ಪತ್ರ ಹೊಂದಿರಬೇಕು ಎಂದು ಶಬರಿಮಲೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರಮಾನೂರ್ ಅವರು ತಿಳಿಸಿದ್ದಾರೆ.
ಶಬರಿಮಲೆ ಅಯ್ಯಪ್ಪಸ್ವಾಮಿಗೆ ವಿಶೇಷ ಮಾಸಿಕ ಪೂಜೆ

