ಕೋಡಿಹಳ್ಳಿ ಚಂದ್ರಶೇಖರ್ ಪೆÇಲೀಸರ ವಶಕ್ಕೆ

ಬೆಳಗಾವಿ: ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಶನಿವಾರ ಬೆಳಗಾವಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಸಾರಿಗೆ ನೌಕರರ ಮುಷ್ಕರವನ್ನು ತೀವ್ರಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಬೆಳಗಾವಿ ಮತ್ತು ಕಲಬುರ್ಗಿಯ ಸಾರಿಗೆ ಮುಖಂಡರೊಂದಿಗೆ ಸಭೆ ನಡೆಸಲು ಕೋಡಿಹಳ್ಳಿ ಚಂದ್ರಶೇಖರ್ ಬೆಳಗಾವಿಗೆ ಆಗಮಿಸಿದ್ದರು. ಸಂದರ್ಭದಲ್ಲಿ ಅವರು ತಂಗಿದ್ದ ಹೋಟೆಲ್‍ಗೆ ಬೆಳಗಾವಿ ಕ್ಯಾಂಪ್ ಪೆÇಲೀಸರು ಬಂದು ವಶಕ್ಕೆ ತೆಗೆದುಕೊಂಡರು.
ಪೊಲೀಸರು ತಮ್ಮನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ತನ್ನನ್ನ ವಶಕ್ಕೆ ಪಡೆಯಲು ಸಕಾರಣ ಗೊತ್ತಿಲ್ಲ. ಇದು ತಪ್ಪು. ಒಂದು ಚಳವಳಿಯನ್ನು ದಮನ ಮಾಡುವ ನೀತಿ ಇದಾಗಿದೆ. ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.