ನಿಗದಿತ ವೇಳಾಪಟ್ಟಿಯಂತೆ ಉನ್ನತ ಶಿಕ್ಷಣದ ಪರೀಕ್ಷೆಗಳು ನಡೆಯಲಿವೆ -ಡಾ. ಅಶ್ವಥ್ ನಾರಾಯಣ್

ಬೆಂಗಳೂರು: ಕೊರೊನಾ 2ನೇ ಅಲೆ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೂ ಉನ್ನತ ಶಿಕ್ಷಣದ ಚಟುವಟಿಕೆ ಹಾಗೂ ಪರೀಕ್ಷೆಗಳೂ ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಪರೀಕ್ಷೆ ಮುಗಿದ ನಂತರ ರಜೆ ನೀಡದೆ ಮುಂದಿನ ವರ್ಷದ ಶೈಕ್ಷಣಿಕ ಚಟುವಟಿಕೆ ಆರಂಭಿಸುತ್ತೇವೆಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ತಿಳಿಸಿದ್ದಾರೆ.
ಈಗಾಗಲೇ ಶೈಕ್ಷಣಿಕ ವರ್ಷದ ನಾಲ್ಕೈದು ತಿಂಗಳು ತಡವಾಗಿದೆ. ಇನ್ನೂ ತಡವಾದರೆ ಓದು, ಪರೀಕ್ಷೆ, ಫಲಿತಾಂಶ, ಉದ್ಯೋಗ, ಮುಂದಿನ ವ್ಯಾಸಂಗಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಈ ಸಾಲಿನ ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ ತರಗತಿಗಳನ್ನು ಆರಂಭಿಸಲಾಗುತ್ತದೆ ಎಂದರು.
ಆಫ್ ಲೈನ್ ಮತ್ತು ಆನ್ ಲೈನ್ ಎರಡೂ ಮಾದರಿಯಲ್ಲಿಯೂ ತರಗತಿಗಳು ಆರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಎರಡರ ಪೈಕಿ ಒಂದಕ್ಕೆ ಕಡ್ಡಾಯವಾಗಿ ಹಾಜರಾಬೇಕು ಎಂದು ಅವರು ಹೇಳಿದರು.