ಬಳ್ಳಾರಿ: ಕೋವಿಡ್ 2ನೇ ಅಲೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮೇ 15 ವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ಬಂದ್ ಮಾಡಲು ಭಾರತೀಯ ಪುರಾತತ್ವ ಇಲಾಖೆ ಆದೇಶಿಸಿದೆ.
ಈ ಕುರಿತು ಇಲಾಖೆಯ ಸ್ಮಾರಕಗಳ ನಿರ್ದೇಶಕ ಎನ್.ಕೆ.ಪಾಠಕ್ ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ.
ಇದರಿಂದ ಹಂಪಿಯ ವಿರೂಪಾಕ್ಷ ದೇವರಿಗೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಆದರೆ ಪ್ರವಾಸಿಗರ ಮತ್ತು ಭಕ್ತರಿಗೆ ವೀಕ್ಷಣೆ ಹಾಗೂ ದರ್ಶನ ಬಂದ್ ಅಗಲಿದೆ.
ಅದೇ ರೀತಿ ವಿಜಯ ವಿಠಲ್ ದೇವಸ್ಥಾನ, ಕಮಲ ಮಹಲ್ ಮತ್ತು ಕಮಲಾಪುರದಲ್ಲಿನ ಮ್ಯೂಸಿಯಂ ಬರುವ ಮೇ 15ವರೆಗೆ ವೀಕ್ಷಣೆಗೆ ಬಂದ್ ಆಗಲಿವೆ.
ಹಂಪಿ ಅμÉ್ಟೀ ಅಲ್ಲದೆ ದೇಶದಲ್ಲಿರುವ ಎಲ್ಲಾ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳು ಮತ್ತು ಮ್ಯೂಸಿಯಂ ಗಳ ಪ್ರವೇಶ ಬಂದ್ ಮಾಡಲು ಆದೇಶಿಸಿದ್ದಾರೆ.
ಹಂಪಿ ಸೇರಿ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳ ವೀಕ್ಷಣೆ ಬಂದ್

