ಮೈಸೂರು: ಭಾರತ ಹಿಂದೂಗಳ ದೇಶವಾಗಿ ಸ್ಥಾಪಿತವಾಗಿದೆ ಎಂದರೆ ಅದಕ್ಕೆ 8ನೇ ಶತಮಾನದಲ್ಲಿ ಶ್ರೀ ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ ಎಂದು ಭಾ.ಜ.ಪ. ನಗರ ಅಧ್ಯಕ್ಷ ಟಿ.ಎಸ್. ಶ್ರೀವತ್ಸರವರು ಹೇಳಿದರು.
ನಗರ ಬಿಜೆಪಿ ಕಚೇರಿಯಲ್ಲಿ ಸೋಮವಾರ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಶಂಕರಾಚಾರ್ಯರ ಜಂಯತಿಯನ್ನು ತತ್ವಜ್ಞಾನಿ ಗಳ ದಿನಾಚರಣೆ ಯನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಟಿ.ಎಸ್.ಶ್ರೀ ವತ್ಸರವರು ಮಾತನಾಡಿದರು.
ಕೇವಲ 32ವರ್ಷವಿದ್ದರೂ ಸಹ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕಾಲ್ನಡಿಗೆಯಲ್ಲೇ ಸಂಚರಿಸಿ ಅದ್ವೈತ ಸಿದ್ದಾಂತವನ್ನು ಸ್ಥಾಪಿಸಿ ಸನಾತನ ಪರಂಪರೆಯ ಪ್ರಾತಃ ಸ್ಮರಣೀಯರಾದರು ಎಂದರು.
ಹಿಂದೂ ಧರ್ಮದ ಜಾಗೃತಿ ಕೆಲಸವನ್ನು ಯಾವುದೇ ಮಾಧ್ಯಮ ಸಂಪರ್ಕವಿಲ್ಲದೆ ಅವರು ಮಾಡಿರುವುದು ಇವತ್ತಿನ ಹಿಂದೂಪರ ಸಂಘಟನೆಗಳಿಗೆ ಸಂಘಟನಾತ್ಮಕವಾಗಿ ಮುನ್ನಡೆಯಲು ಮಾದರಿಯಾಗಿದೆ ಎಂದವರು ತಿಳಿಸಿದರು.
ಕೊರೊನಾ ಸಂಧರ್ಭದಲ್ಲಿ ನಾವು ಕಂಡದ್ದು ಸಾಮಾಜಿಕ ಅಂತರ ಮತ್ತು ಕ್ವಾರೆಂಟೈನ್ ಇವುಗಳು ಅಂದಿನ ಕಾಲದಲ್ಲೂ ಸಹವಿತ್ತು ಅಂದು ಹೆಚ್ಚಾಗಿ ಪಾಲಿಸುತ್ತಿದ್ದ ಕಾರಣ ನೂರಾರು ವರುಷ ನಮ್ಮ ಹಿರಿಯರು ಅರೋಗ್ಯ ಜೀವನ ನಡೆಸಿದ್ದರು ಎಂದರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಸರ್ಕಾರದಿಂದ ಶಂಕರಾಚಾರ್ಯರ ಜಯಂತಿಯನ್ನು ವಿಶ್ವ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸುವಂತೆ ಜಾರಿಗೆ ತಂದರು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ಸೋಮ ಸುಂದರ್, ವಾಣೀಶ್ ಕುಮಾರ್, ಚೇತನ, ನಂದಕುಮಾರ್, ಜಯರಾಮ್, ಜೋಗಿಮಂಜು ಇದ್ದರು.

