ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೇ ಭೂಮಿಯೊಡೆಯ, ಮೋದಿ ಕಾಲದಲ್ಲಿ ಬದುಕಿ ಉಳಿದವನೇ ಒಡೆಯ -ಡಿ.ಕೆ ಸುರೇಶ್

ಬೆಂಗಳೂರು: ಇಂದಿರಾ ಗಾಂಧಿ ಅವರು ಉಳುವವನೆ ಭೂಮಿಯ ಒಡೆಯ ಅಂತಾ ಜನರಿಗೆ ಜಮೀನು ಕೊಟ್ಟರು, ಈ ಸರ್ಕಾರ ಉಳಿದುಕೊಂಡವನೇ ಒಡೆಯ ಎನ್ನುವ ಸ್ಥಿತಿ ನಿರ್ಮಿಸಿದೆ. ಈ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಖಾತರಿಗೆ ಆರೋಗ್ಯ ಭದ್ರತಾ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸುರೇಶ್ ಅವರು ಮಾತನಾಡಿದರು.
ಇಂದಿರಾ ಗಾಂಧಿ ಅವರು ಉಳುವವನೆ ಭೂಮಿಯ ಒಡೆಯ ಅಂತಾ ಜನರಿಗೆ ಜಮೀನು ಕೊಟ್ಟರು. ಆದರೆ ಈ ಸರ್ಕಾರ ಉಳಿದುಕೊಂಡವನೇ ಒಡೆಯ ಎನ್ನುವ ಸ್ಥಿತಿ ನಿರ್ಮಿಸಿದೆ. ನೀವು ಇನ್ನೂ ಹತ್ತು ವರ್ಷ ಅಧಿಕಾರದಲ್ಲಿರಿ, ನಿಮಗೆ ದೇವರು 100 ವರ್ಷ ಆಯಸ್ಸು ನೀಡಲಿ. ಆದರೆ ನೀವು ಬದಲಾವಣೆ ತರುತ್ತೀರಿ ಅಂತಾ ನಂಬಿ ನಿಮ್ಮನ್ನು ಆರಿಸಿದ ಜನರ ಜೀವ ಉಳಿಸಿ. ನಿಮಗೆ ಚುನಾವಣೆ, ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಲು ಇರುವ ಆಸಕ್ತಿ ರಾಜ್ಯದ ಜನರ ಪ್ರಾಣ ಉಳಿಸಲು ಇಲ್ಲ. ನೀವು ಈಗ ಉತ್ತರ ಪ್ರದೇಶ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ ಎಂದರು.
ಆಯುμÁ್ಮನ್ ಭಾರತ ಕಾರ್ಯಕ್ರಮ ಕೇಳಲು ಚೆನ್ನಾಗಿದೆ. ಆದರೆ ಇದರಲ್ಲಿ ಆಯಸ್ಸು ಹೆಚ್ಚುತ್ತಿಲ್ಲ, ಮತ ಹಾಕಿದವರು ಸಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಭದ್ರತಾ ಕಾಯ್ದೆ ಜಾರಿಗೆ ತನ್ನಿ ಎಂದು ಕಾಂಗ್ರೆಸ್ ಆಗ್ರಹಿಸುತ್ತಿದೆ ಎಂದರು.
ಅನೇಕ ಆಸ್ಪತ್ರೆಗಳು ಜನರ ಸುಲಿಗೆ ಮಾಡುತ್ತಿವೆ. ಲಸಿಕೆ, ಔಷಧ, ಆಕ್ಸಿಜನ್ ಎಲ್ಲದರಲ್ಲೂ ಸುಲಿಗೆ ಮಾಡಲಾಗುತ್ತಿದೆ. ಇದರಲ್ಲಿ ಯಾರ ಕೈವಾಡವಿದೆ? ಎಂದವರು ಕೇಳಿದರು.
ಬ್ಲಾಕ್ ಫಂಗಸ್ ಕಾಯಿಲೆ ಬಂದವರೆಷ್ಟು, ಸತ್ತವರೆಷ್ಟು? ಸರ್ಕಾರದ ಬಳಿ ದಾಖಲೆ ಇಲ್ಲ. ಉಪಮುಖ್ಯಮಂತ್ರಿಗಳು ಸಾವೇ ಆಗಿಲ್ಲ ಅಂತಾರೆ, ಮತ್ತೊಬ್ಬ ಸಚಿವರು 4 ಜನ ಸತ್ತಿದ್ದಾರೆ ಅಂತಾರೆ ಎಂದರು.
ವಿಶ್ವದಲ್ಲಿ ಕೇವಲ ಭಾರತದಲ್ಲಿ ಮಾತ್ರ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಇದಕ್ಕೆ ಕಾರಣ ಏನು ಪತ್ತೆಹಚ್ಚಿ. ಇದು ಬಂದಿರೋದು ಕೈಗಾರಿಕೆ ಆಕ್ಸಿಜನ್ ನಿಂದಲೇ, ನೀವು ಕೊಟ್ಟ ವೆಂಟಿಲೇಟರ್ ನಿಂದಲೇ? ಸ್ಟೆರಾಯ್ಡ್ ಗಳಿಂದಲೇ? ಯಾವುದರಿಂದ ಫಂಗಸ್ ಬಂದಿದೆ ಅಂತಾ ತನಿಖೆ ಮಾಡಿ ಎಂದು ಡಿಕೆ ಸುರೇಶ್ ಹೇಳಿದರು.
ಕೆಲವರು 3ನೇ ಅಲೆ ತಯಾರಾಗುತ್ತಿದ್ದೇವೆ ಅಂತಿದ್ದಾರೆ. ಇವರಿಗೆ ಎರಡನೇ ಅಲೆ ನೋಡಿಕೊಳ್ಳುವ ಯೋಗ್ಯತೆ ಇಲ್ಲ. ಮಾತೆತ್ತಿದರೆ ಸುದ್ದಿಗೋಷ್ಠಿ ನಡೆಸಿ ಸುಳ್ಳು ಹೇಳುತ್ತಾರೆ. ಒಬ್ಬ ಸಂಸದ ಖಾಸಗಿ ಆಸ್ಪತ್ರೆಯಲ್ಲಿ 900 ರೂ ಕೊಟ್ಟು ಲಸಿಕೆ ತೆಗೆದುಕೊಳ್ಳಿ ಅಂತಾ ತಮ್ಮ ಫೆÇೀಟೋ ಹಾಕಿಕೊಂಡು ಜಾಹೀರಾತು ನೀಡುತ್ತಾರೆಂದರು.
ಈ ಸರ್ಕಾರಕ್ಕೆ ಕರುಣೆಯೇ ಇಲ್ಲ. ಜನರಿಗೆ ಊಟ ಇಲ್ಲ, ಕೆಲಸ ಇಲ್ಲ, ಔಷಧ ಇಲ್ಲ. ಪೆಟ್ರೋಲ್, ಡೀಸೆಲ್ ಬೆಲೆ 12 ಬಾರಿ ಹೆಚ್ಚಿಸಿದ್ದಾರೆ. ಪೆಟ್ರೋಲಿಯಂ ಸಚಿವರು ನನ್ನ ಕೈಯಲ್ಲಿ ಏನೂ ಇಲ್ಲ ಅಂತಿದ್ದಾರೆ? ವಿವಿಧ ರಾಜ್ಯಗಳ ಚುನಾವಣೆ ಬಂದಾಗ ಬೆಲೆ ಹೆಚ್ಚಳ ತಡೆಯುವ ಸಾಮಥ್ರ್ಯ ಇರುವಾಗ ಕೋವಿಡ್ ಪಿಡುಗು ಸಮಯದಲ್ಲಿ ಯಾಕಿಲ್ಲ? ಇದು ಆಡಳಿತಾನಾ? ಇದನ್ನು ಕಾಂಗ್ರೆಸ್ ಪ್ರಶ್ನಿಸಬಾರದೇ? ಎಂದರು.