ಇಸ್ರೇಲ್ ಮತ್ತು ಪ್ಯಾಲೆಸ್ಥಿನ್ ನಡುವಿನ ಮುಗಿಯದ ಸಂಘರ್ಷ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಇಡೀ ಜಗತ್ತು ಒಂದುಕಡೆ ಕೋವಿಡ್ ಸೋಂಕಿನಿಂದ ತತ್ತರಿಸುತ್ತಿದ್ದಾರೆ, ಆ ಕಡೆ ಪಶ್ಚಿಮ ಏμÁ್ಯದ ರಾಷ್ಟ್ರಗಳಾದ ಇಸ್ರೇಲ್ ಮತ್ತು ಪ್ಯಾಲೆಸ್ಥಿನ್ ನಡುವಿನ ಕಲಹ 3ನೇ ಮಹಾಯುದ್ಧಕ್ಕೆ ನಾಂದಿಯಾಗುತ್ತೇನೋ ಎಂಬ ಹಂತಕ್ಕೆ ತಲುಪಿ ಪ್ರಪಂಚಾದ್ಯಂತ ಆತಂಕಕ್ಕೆ ದೂಡಿದ್ದು, ನಂತರ ಕದನ ವಿರಾಮದೊಂದಿಗೆ ಉಪಶಮನವಾಗಿದ್ದ ಘಟನೆಯು ಕಳೆದ ವಾರ ನಡೆದಿತ್ತು.
ವಿಶ್ವದ ಶಕ್ತಿಶಾಲಿಯಾದ ಸೈನ್ಯ ಹೊಂದಿರುವ, ,ತನ್ನ ಸುತ್ತಲೂ ಶತ್ರು ರಾಷ್ಟ್ರಗಳ ಜೊತೆಗೆ ಹೋರಾಡುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿ ಕೊಂಡ ವಿಶ್ವದ ಏಕೈಕ ಯಹೂದಿಗಳ ದೇಶ,
ಭಾರತದ ಪರಮ ಮಿತ್ರನೇಂದೆ ಕರೆಸಿಕೊಳ್ಳುವ ಇಸ್ರೇಲ್ ಮತ್ತು ಪ್ಯಾಲೆಸ್ಥಿನ್ ನಡುವಿನ ಸಂಘರ್ಷ ವು 11ದಿನಗಳ ಕಾಲ ನಡೆದು ಎರಡು ಕಡೆ 250ಕ್ಕೂ ಹೆಚ್ಚು ಜನ ಸಾವಿಗೆ ಈಡಾಗಿ, ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಯಾಗಿದೆ, ಈ ಸಂಘರ್ಷದಲ್ಲಿ ಇಸ್ರೇಲ್ ನಾಗರಿಕರು ಮತ್ತು ಅಲ್ಲೇ ಇದ್ದಂತಹ ಭಾರತದ ಪ್ರಜೆಯು ಸಾವಿಗೆ ಒಳಗಾದರು.
ಈ ಮೊದಲು ಎರಡೂ ರಾಷ್ಟ್ರಗಳ ನಡುವೆ 2014ರಲ್ಲಿ ಐವತ್ತು ದಿನಗಳವರೆಗೆ ಯುದ್ಧ ನಡೆದಿತ್ತು. ಅದರಲ್ಲಿ ನೂರಾರು ಜನರೂ ಸಾವಿಗೀಡಾಗಿದ್ದರು. ಮತ್ತೆ ಏಳು ವರ್ಷಗಳ ಎರಡು ರಾಷ್ಟ್ರಗಳ ನಡುವೆ ನಡೆದಿದೆ.
ಈ ಪರಸ್ಪರ ಸಂಘರ್ಷಕ್ಕೆ ಕಾರಣ ಏನು ಅಂತ ನೋಡಿದರೆ, ಜೆರುಸಲೇಂನ ಅಲ್-ಅಕ್ಸಾ ಮಸೀದಿಯು ವಿವಾದ. ಇದು ಮುಸ್ಲಿಂ ಹಾಗೂ ಯಹೂದಿಗಳ ಪವಿತ್ರವಾದ ಸ್ಥಳವಾಗಿದೆ. ರಂಜಾನ್ ಮಾಸ ಆರಂಭವಾಗುತ್ತಿದ್ದಂತೆ, ಏಪ್ರಿಲ್ ಮಧ್ಯ ಭಾಗದಲ್ಲಿ ಗಾಜಾ ಹಾಗೂ ವೆಸ್ಟ್ ಬ್ಯಾಂಕ್‍ಗಳಲ್ಲಿ ರಾತ್ರಿವೇಳೆಯಲ್ಲಿ ನಾಗರಿಕರು ಹಾಗೂ ಪೆÇಲೀಸರ ನಡುವೆ ಸಂಘರ್ಷಗಳು, ಮತ್ತು ಇನ್ನೊಂದು ಕಾರಣವನ್ನು ತಜ್ಞರು ಹೇಳುತ್ತಾರೆ,
ಗಾಜಾ ಪಟ್ಟಿಯು ಪ್ಯಾಲೆಸ್ಟೀನ್‍ನ ಸಂಘಟನೆಯಾದ ಹಮಸ್‍ನ ನಿಯಂತ್ರಣದಲ್ಲಿದೆ. ಈ ಸಂಘಟನೆಯು ಹಲವು ಬಾರಿ ಇಸ್ರೇಲ್ ಜತೆಗೆ ಸಂಘರ್ಷ ನಡೆಸಿದೆ. ಹಮಸ್‍ಗೆ ಶಸ್ತ್ರಾಸ್ತ್ರ ಸರಬರಾಜಾಗುವುದನ್ನು ತಡೆಯಲು, ಗಾಜಾದ ಗಡಿಯುದ್ದಕ್ಕೂ ಇಸ್ರೇಲ್ ಹಾಗೂ ಈಜಿಪ್ಟ್ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಿವೆ. ಇದು ಇಸ್ರೇಲ್– ಪ್ಯಾಲೆಸ್ಟೀನ್ ನಡುವಿನ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ .
ಇಲ್ಲಿ ಉಂಟಾದ ಸಂಘರ್ಷವನ್ನು ತಡೆಯಲು ಪೊಲೀಸರು ಅಶ್ರುವಾಯು ಹಾಗೂ ಗ್ರೆನೇಡ್ ಪ್ರಯೋಗಿಸಿದ್ದರು. ಇದು ಈಗ ಗಾಜಾ ಪಟ್ಟಿಯಲ್ಲಿ ಭಾರಿ ಸಂಘರ್ಷಕ್ಕೆ ತಿರುಗಿತ್ತು.
ಇಸ್ರೇಲ್ ಹಾಗೂ ಪ್ಯಾಲೆಸ್ಥಿನ್ ಗಳು ಪರಸ್ಪರ ವೈಮಾನಿಕ ದಾಳಿ ಮೂಲಕ ರಾಕೆಟ್, ಮೀಸೈಲ್ ಗಳ ಪ್ರಯೋಗ ಮಾಡಿಕೊಂಡಿದ್ದವು, ಇದರಿಂದ ಇಸ್ರೇಲ್ ನ ಸತತ ದಾಳಿ ಯಿಂದ ಗಾಜಾಪಟ್ಟಿ ನಗರ ಅಕ್ಷರಶಃ ದ್ವಂಸವಾಗಿತ್ತು, ಜನರು ಬೀದಿಗೆ ಬಿದ್ದರೆ, ಅಲ್ಲಿನ ಹಮಾಸ್ ಉಗ್ರರ ಕಛೇರಿಗಳು ಮನೆಗಳು, ಮಾದ್ಯಮ ಕೇಂದ್ರದ ಕಟ್ಟಡಗಳು, ಸುರಂಗಗಳು ಮುಂತಾದಗಳೆಲ್ಲವು ದಾಳಿಗೆ ಆಹುತಿಗಾದವು, ಮಕ್ಕಳು ಮಹಿಳೆಯರು, ನಾಗರಿಕರು ಸಾವಿಗೆ ಒಳಗಾದರು.
ಸಂಘರ್ಷಕ್ಕೆ ಮೂಲ ಕಾರಣ: 1967ರಲ್ಲಿ ಇಸ್ರೇಲ್, ಸಿರಿಯಾ, ಜಾರ್ಡನ್ ಹಾಗೂ ಪ್ಯಾಲೆಸ್ತೀನ್‍ಗಳ ನಡುವೆ ಯುದ್ಧ ನಡೆಯಿತು. ಈ ವೇಳೆ ಇಸ್ರೇಲ್ ಪೂರ್ವ ಜೆರುಸಲೇಂ ಹಾಗೂ ವೆಸ್ಟ್ ಬ್ಯಾಂಕ್‍ನ್ನು ವಶಕ್ಕೆ ಪಡೆಯಿತು. ಅದಕ್ಕೂ ಮುನ್ನ ಇವೆರಡೂ ಜಾರ್ಡನ್ ವಶದಲ್ಲಿತ್ತು. ಅಂದಿನಿಂದಲೇ ಈ ಪ್ರದೇಶಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನಿಯರ ನಡುವೆ ಹಿಂಸಾತ್ಮಕ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇಡೀ ಜೆರುಸಲೇಂ ತನ್ನ ರಾಜಧಾನಿ ಎಂಬುವುದು ಇಸ್ರೇಲ್ ವಾದವಾದರೆ, ಅತ್ತ ಪ್ಯಾಲೆಸ್ತೀನ್ ಇದನ್ನು ತನ್ನ ಭವಿಷ್ಯದ ರಾಜಧಾನಿ ಎಂದು ವಾದಿಸುತ್ತದೆ.
ಈ ಎರೆಡು ರಾಷ್ಟ್ರಗಳ ಸಂಘರ್ಷ ಇಂದು ನಿನ್ನೆಯದಲ್ಲ,ಸುಮಾರು ಎರಡು ಶತಮಾನಗಳ ಇತಿಹಾಸವಿದೆ, ಅದೆನೇಂದು ನೋಡಿದರೆ- ಶತಮಾನದ ಹಿಂದೆ ಒಟ್ಟೋಮನ್ ಸಾಮ್ರಾಜ್ಯದ ಉತ್ತುಂಗದ ಕಾಲದಲ್ಲಿ ಈ ಪ್ರದೇಶದಲ್ಲಿ ಅರಬ್ ಮುಸ್ಲಿಮರು ಬಹುಸಂಖ್ಯಾತರಾಗಿದ್ದರು. ಜೆರುಸಲೇಂನ ಕೆಲವು ಭಾಗದಲ್ಲಿ ಮಾತ್ರವೇ ಯಹೂದಿಗಳು ಮತ್ತು ಕ್ರೈಸ್ತರು ಇದ್ದರು. ಈಗಿನ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಪ್ರದೇಶವು ಸಂಪೂರ್ಣವಾಗಿ ಪ್ಯಾಲೆಸ್ಟೀನ್ ಆಗಿತ್ತು. ಇಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯವಿತ್ತು.
19ನೇ ಶತಮಾನದಲ್ಲಿ ಯೂರೋಪ್‍ನಲ್ಲಿ ಯಹೂದಿಗಳ ಮೇಲೆ ಕಿರುಕುಳ ಆರಂಭವಾಗಿತ್ತು. 1799ರಲ್ಲಿ ಚಕ್ರವರ್ತಿ ನೆಪೆÇೀಲಿಯನ್ ಬೋನಾಪಾರ್ಟ್, ಯಹೂದಿಗಳ ಮೂಲ ನೆಲೆಯಾದ ಪ್ಯಾಲೆಸ್ಟೀನ್‍ನಲ್ಲಿ ಯಹೂದಿಗಳಿಗೆ ಆಶ್ರಯ ಕಲ್ಪಿಸುವುದಾಗಿ ಘೋಷಿಸಿದನು. ಪ್ಯಾಲೆಸ್ಟೀನ್ ಅರಬರ ವಿರೋಧದಿಂದಾಗಿ ಈ ಘೋಷಣೆ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ ಯೂರೋಪ್‍ನಿಂದ ಬಂದಿದ್ದ ಕೆಲವು ಯಹೂದಿಗಳು ಇಲ್ಲಿ ನೆಲೆಸಿದರು.1880ರ ನಂತರ ಪ್ಯಾಲೆಸ್ಟೀನ್‍ನಲ್ಲಿ ಯಹೂದಿಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಫ್ರಾನ್ಸ್‍ನ ನೇತೃತ್ವದಲ್ಲಿ ಐರೋಪ್ಯ ರಾಷ್ಟ್ರಗಳು ಒಂದಾದವು. ಯಹೂದಿಗಳಿಗೆ ಆಶ್ರಯ ಕಲ್ಪಿಸಲು ದೇಣಿಗೆ ಒದಗಿಸಿದವು. 1897ರಲ್ಲಿ ಗಣನೀಯ ಸಂಖ್ಯೆಯ ಯಹೂದಿಗಳು ಪ್ಯಾಲೆಸ್ಟೀನ್‍ಗೆ ಬಂದರು. ಪ್ಯಾಲೆಸ್ಟೀನ್ ಅರಬರ ವಿರೋಧ ನಡೆಯುತ್ತಲೇ ಇತ್ತು. 1907ರಲ್ಲಿ ಬ್ರಿಟಿμï ಕಂಪನಿಯು ಯಹೂದಿಗಳಿಗಾಗಿ ಪ್ಯಾಲೆಸ್ಟೀನ್‍ನಲ್ಲಿ ಭೂಮಿ ಖರೀದಿಸಿತು. ಇದರ ಪರಿಣಾಮವಾಗಿ ಅಲ್ಲಿಂದ 60 ಸಾವಿರಕ್ಕೂ ಹೆಚ್ಚು ಅರಬರನ್ನು ಹೊರಹಾಕಲಾಯಿತು.
ಕಾಲಕ್ರಮೇಣ ಪ್ಯಾಲೆಸ್ಟೀನ್‍ಗೆ ಬಂದು ನೆಲೆಸುವ ಯಹೂದಿಗಳ ಸಂಖ್ಯೆ ಹೆಚ್ಚಾಯಿತು. ಯಹೂದಿಗಳ ವಸತಿ ಪ್ರದೇಶದ ರಕ್ಷಣೆಗೆ ಹಶ್ಮೋರ್ ಎಂಬ ಅರೆಸೇನಾಪಡೆಯನ್ನು ಸ್ಥಾಪಿಸಲಾಯಿತು. ಯಹೂದಿ ವಿರೋಧಿ ಪ್ಯಾಲೆಸ್ಟೀನ್ ಅರಬರನ್ನು ನಿಯಂತ್ರಣದಲ್ಲಿ ಇಡಲು ಈ ಪಡೆಯು ಶಸ್ತ್ರಾಸ್ತ್ರ ಕಾರ್ಯಾಚರಣೆ ನಡೆಸುತ್ತಿತ್ತು. ಲಕ್ಷಾಂತರ ಸಂಖ್ಯೆಯ ಪ್ಯಾಲೆಸ್ಟೀನ್ ಅರಬರು ದೇಶ ತೊರೆದರು. ಇಂದಿಗೂ ಇವರು ಪ್ಯಾಲೆಸ್ಟೀನ್‍ಗೆ ವಾಪಸಾಗಲು ಇಸ್ರೇಲ್ ಬಿಡುತ್ತಿಲ್ಲ
ಎರಡನೇ ವಿಶ್ವಯುದ್ಧದ ನಂತರ 1948ರಲ್ಲಿ ಬ್ರಿಟಿಷರು ಪ್ಯಾಲೆಸ್ಟೀನ್ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಟ್ಟರು. ಆಗ ಯಹೂದಿಗಳು ತಮ್ಮ ನಿಯಂತ್ರಣದಲ್ಲಿ ಇದ್ದ ಜಾಗವನ್ನು ಇಸ್ರೇಲ್ ಎಂದು ಘೋಷಿಸಿದರು. ಪ್ಯಾಲೆಸ್ಟೀನ್‍ನ ಬಹುಭಾಗವನ್ನು ಯಹೂದಿಗಳು ನಿಯಂತ್ರಣಕ್ಕೆ ತೆಗೆದುಕೊಂಡರು. ಮೆಡಿಟರೇನಿಯನ್ ಸಮುದ್ರದ ದಂಡೆಯಲ್ಲಿದ್ದ ಗಾಜಾಪಟ್ಟಿಯನ್ನು, ಸೇನಾ ಕಾರ್ಯಾಚರಣೆ ಮೂಲಕ ಈಜಿಪ್ಟ್ ವಶಪಡಿಸಿಕೊಂಡಿತು. ಜೋರ್ಡನ್ ಸಾಮ್ರಾಜ್ಯವು ಜೋರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನು (ವೆಸ್ಟ್ ಬ್ಯಾಂಕ್) ವಶಪಡಿಸಿಕೊಂಡಿತು. ಇಸ್ರೇಲ್ ಮತ್ತು ಜೋರ್ಡನ್ ಮಧ್ಯೆ ಜೆರುಸಲೇಂ ಹಂಚಿಹೋಯಿತು.
ಜೋರ್ಡನ್‍ನ ವಶದಲ್ಲಿದ್ದ ಜೆರುಸಲೇಂನ ಭಾಗವನ್ನು 1967ರಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಇಸ್ರೇಲ್ ವಶಪಡಿಸಿಕೊಂಡಿತು. ಆದರೆ ವೆಸ್ಟ್ ಬ್ಯಾಂಕ್‍ನಲ್ಲಿ ಪ್ಯಾಲೆಸ್ಟೀನ್ ಅರಬರ ಪ್ರಾಬಲ್ಯವಿದ್ದ ಕಾರಣ, ಸಂಪೂರ್ಣ ನಿಯಂತ್ರಣ ಸಾಧ್ಯವಾಗಲಿಲ್ಲ. ಇಲ್ಲಿನ ಅರಬರು ಇದನ್ನು ಪ್ಯಾಲೆಸ್ಟೀನ್ ಎಂದು ಘೋಷಿಸಿಕೊಂಡಿದ್ದಾರೆ.
ಮೂರು ಧರ್ಮಗಳ ಪವಿತ್ರ ಸ್ಥಳ – ಜೆರುಸಲೇಂ: ಜೆರುಸಲೇಂ ಇದು ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿ ಈ ಮೂರೂ ಧರ್ಮದವರಿಗೆ ಬಹಳ ಪ್ರಮುಖವಾದ ಸ್ಥಳವಾಗಿದೆ. ಈ ಮೂರೂ ಧರ್ಮಗಳ ಆರಂಭ ಬೈಬಲ್‍ನಲ್ಲಿ ಉಲ್ಲೇಖವಾಗುವ ಪ್ರವಾದಿಯಿಂದ ಒಂದಾಗುತ್ತವೆ. ಕ್ರಿಶ್ಚಿಯನ್ ಧರ್ಮದ ಅನ್ವಯ ಇಲ್ಲಿನ ಕಲ್ವಾರಿ ಬೆಟ್ಟದಲ್ಲಿ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಲಾಗಿತ್ತು. ಯೇಸುವಿನ ಸಮಾಧಿ ಇಲ್ಲಿನ ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್ ಒಳಗಿದೆ ಎನ್ನಲಾಗಿದೆ.
ಯಹೂದಿಗಳು ಜೆರುಸಲೇಂ ತಮ್ಮದೆನ್ನುತ್ತಾರೆ. ಇಲ್ಲೇ ಅಬ್ರಾಹಮ್ ತನ್ನ ಮಗ ಐಸಾಕ್‍ನ್ನು ಬಲಿ ಅರ್ಪಿಸಲು ಮುಂದಾಗಿದ್ದೆಂಬ ನಂಬಿಕೆ ಅವರದ್ದು.
ಇಲ್ಲಿ ಯಹೂದಿಗಳ ಕೋಟೆಲ್ ಎನ್ನಲಾಗುವ ವೆಸ್ಟರ್ನ್ ವಾಲ್ ಇದೆ. ಈ ಗೋಡೆ ಪವಿತ್ರ ಮಂದಿರದ ಅವಶೇಷವಾಗಿದೆ. ಈ ಮೂಲಕ ಜೆರುಸಲೇಂ, ಕ್ರಿಶ್ಚಿಯನ್, ಮುಸ್ಲಿಂ ಹಾಗೂ ಯಹೂದಿಗಳ ಪಾಲಿಗೆ ಬಹಳ ಮುಖ್ಯವಾಗಿದೆ.
ಮುಸಲ್ಮಾನರಿಗೆ ಕೂಡ ಇದು ಪವಿತ್ರ ಸ್ಥಳ ವಾಗಿದೆ, ಡೋಮ್ ಆಫ್ ರಾಕ್ ಹಾಗೂ ಅಲ್-ಅಕ್ಸಾ ಮಸೀದಿ ಇಲ್ಲಿದೆ ಎಂಬ ಕಾರಣಕ್ಕೆ ಮುಸಲ್ಮಾನರಿಗೆ ಇದು ಮಹತ್ವದ್ದು. ಈ ಮಸೀದಿಯನ್ನು ಮೂರನೇ ಅತ್ಯಂತ ಪವಿತ್ರ ಸ್ಥಳ ಎನ್ನಲಾಗಿದೆ. ಮೊಹಮ್ಮದ್ ಪೈಗಂಬರ್ ತನ್ನ ಯಾತ್ರೆಗೂ ಮುನ್ನ ಮೆಕ್ಕಾದಿಂದ ಇಲ್ಲಿವರೆಗೆ ತನ್ನ ಪ್ರಯಾಣ ನಿಗದಿಪಡಿಸಿದ್ದರು. ಈ ಮಸೀದಿ ಬಳಿಯೇ ಡೋಮ್ ಆಫ್ ರಾಕ್ ಇದೆ. ಇಲ್ಲಿಂದಲೇ ಮೊಹಮ್ಮದ್ ಪೈಗಂಬರ್ ಸ್ವರ್ಗಕ್ಕೆ ಹೋಗಿದ್ದರೆಂಬುವುದು ಮುಸಲ್ಮಾನರ ನಂಬಿಕೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಒಳಗೊಂಡ ಪ್ರದೇಶವನ್ನು ಎರಡು ಅಧಿಕೃತ ದೇಶಗಳನ್ನಾಗಿ ಘೋಷಿಸುವ ವಿಶ್ವಸಂಸ್ಥೆ, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಪ್ರಯತ್ನಗಳು ಈವರೆಗೆ ಫಲಪ್ರದವಾಗಿಲ್ಲ. ವೆಸ್ಟ್‍ಬ್ಯಾಂಕ್ ಮತ್ತು ಗಾಜಾವನ್ನು ನಿಯಂತ್ರಣದಲ್ಲಿ ಇರಿಸಿಕೊಂಡಿರುವ ಹಮಸ್ ಬಂಡುಕೋರರು ಇಸ್ರೇಲ್‍ನ ಮೇಲೆ ಶಸ್ತ್ರಾಸ್ತ್ರ ದಾಳಿ ನಡೆಸುತ್ತಲೇ ಇದ್ದಾರೆ. ಇವರ ಮೇಲೆ ಇಸ್ರೇಲ್ ಸಹ ಪ್ರತಿದಾಳಿಯನ್ನು ನಡೆಸುತ್ತಲೇ ಇದೆ
ಇಸ್ರೇಲ್ ಮತ್ತು ಗಾಜಾದ ಹಮಸ್‍ನ ಉಗ್ರರ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ವಿಶ್ವಸಂಸ್ಥೆ ಕದನ ವಿರಾಮ ಘೋಷಿಸಲು ಮುಂದಾಗಿತ್ತು. ವಿಶ್ವಸಂಸ್ಥೆಯ ಈ ಪ್ರಸ್ತಾವಿತ ಕ್ರಮಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಪ್ರಾನ್ಸ್, ಜರ್ಮನಿ ಮತ್ತು ಈಜಿಪ್ಟ್ ದೇಶಗಳು ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಲು ಸತತ ಪ್ರಯತ್ನಗಳನ್ನು ಮಾಡಿದ್ದವು.
ಇಸ್ರೇಲ್ ಮತ್ತು ಹಮಸ್ ಗಳ ನಡುವೆ ನಡೆದ ಗಾಜಾ ಪಟ್ಟಿಯಲ್ಲಿ 11 ದಿನಗಳ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಕದನ ವಿರಾಮವನ್ನು ಒಪ್ಪಿಕೊಂಡವು.
ಈ ವಿಚಾರವಾಗಿ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು, ಇಸ್ರೇಲ್‍ನ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಇದಕ್ಕಾಗಿ ಈಜಿಪ್ಟ್ ದೇಶವು ಮಾಡಿರುವ ಎಲ್ಲ ಶಿಫಾರಸುಗಳನ್ನು ಸರ್ವಾನುಮತದಿಂದ ಇಸ್ರೇಲ್ ಸ್ವೀಕರಿಸಿದೆ ಎಂದು ಹೇಳಿದರು. ಹಾಗೆಯೇ ಹಮಾಸ್ ಕೂಡ ಈ ಒಪ್ಪಂದವನ್ನು ಒಪ್ಪಿಕೊಂಡಿದೆ. ಈ ಸಂಘರ್ಷ ಈಗಿನ ಸಂದರ್ಭದಲ್ಲಿ ಕೊನೆ ಗೊಂಡಿರಬಹುದು ಅದರೆ ಮತ್ತೆ ಯಾವಾಗಲಾದರೂ ಭುಗಿಲುಲೇಳಬಹುದು,
ಶತಮಾನದ ಸಂಘರ್ಷವನ್ನು ಕೊನೆಗಳಿಸಲೇ ಬೇಕಿದೆ. ಏಕೆಂದರೆ ಪ್ರತಿ ಸಲವು ಎರಡು ದೇಶಗಳ ಮಧ್ಯೆ ಸಂಘರ್ಷ ಏರ್ಪಟ್ಟಾಗಲೂ ಬಲಿಯಾಗುವುದು ನಾಗರಿಕರು ಮಹಿಳೆಯರು, ಮಕ್ಕಳು ಆಗಿರುತ್ತಾರೆ.
ವಿಶ್ವಸಂಸ್ಥೆ, ಮತ್ತು ಜಗತ್ತಿನ ಪ್ರಬಲ ದೇಶಗಳು ಈ ಪ್ರದೇಶಗಳಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡುವುದು ಅನಿವಾರ್ಯವಾಗಿದೆ.