ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡಲು ಅವಕಾಶ ಕಲ್ಪಿಸಲು ಮನವಿ

ಮೈಸೂರು: ನಗರದಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಅವಧಿಯಲ್ಲಿ ಪ್ರಾಣಿ-ಪಕ್ಷಿಳಿಗೆ ಆಹಾರ ನೀಡಲು ಅವಕಾಶ ಕಲ್ಪಿಸಲು ಮನವಿ ಮಾಡಲಾಗಿದೆ.
ಕಠಿಣ ಲಾಕ್ ಡೌನ್ ನಿಯಮವನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದು, ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30 ನಿಮಿಷಗಳು ಮೂಕ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಆರಕ್ಷಕ ಇಲಾಖೆ ಅಣುವು ಮಾಡಿಕೊಡಬೇಕು ಮತ್ತು ನಗರಪಾಲಿಕೆ ಜೋನ್ ವಲಯಮಟ್ಟದಲ್ಲಿ ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರ ತಂಡ ರಚಿಸಬೇಕಾಗಿದೆ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.
ಕೆಎಂಪಿಕೆ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರಾಣಿ-ಪಕ್ಷಿಗಳಾದ ದನ, ಬೀದಿ ನಾಯಿ ಮತ್ತು ಕೋತಿಗಳಿಗೆ ಪ್ರತಿನಿತ್ಯ ಆಹಾರ ಕೊಡುವ ಪ್ರಾಣಿ ಪಕ್ಷಿಗಳ ಸೇವಾ ಜಾಗೃತಿ ಅಭಿಯಾನವೂ ಕಳೆದ 25 ದಿನಗಳಿಂದ ನಡೆಯುತ್ತಾ ಬಂದಿದ್ದು, ಹಾಲು, ಅನ್ನ ಮೊಸರು, ಮೊಟ್ಟೆ, ಬನ್ ಬಿಸ್ಕೆಟ್ ಮತ್ತು ಹಸಿಹುಲ್ಲು, ಬಾಳೆಹಣ್ಣು ನೀಡುತ್ತಾ ಬಂದಿದ್ದು, ಹತ್ತಾರು ಯುವಕರ ತಂಡ ಬೆಳಗ್ಗೆ ಮಹಾರಾಜ ಕಾಲೇಜು ಮೈದಾನ, ಯುವರಾಜ ಕಾಲೇಜು, ಓವೆಲ್ಸ್ ಮೈದಾನ, ದಸರಾ ವಸ್ತುಪ್ರದರ್ಶನ ಮೈದಾನ ಸೇರಿದಂತೆ ಹಲವೆಡೆ ಪ್ರಾಣಿಪಕ್ಷಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ಕನಿಷ್ಠ 30 ನಿಮಿಷಗಳು ಪ್ರಾಣಿಪಕ್ಷಿಗಳಿಗೆ ಮೇವು ನೀಡುವ ಸ್ವಯಂ ಸೇವಕರಿಗೆ ಆರಕ್ಷಕ ಇಲಾಖೆ ಅಣುವು ಮಾಡಿಕೊಡಬೇಕು ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮನವಿ ಮಾಡಿಕೊಂಡಿದ್ದಾರೆ.
ಪ್ರಾಣಿ ಪಕ್ಷಿಗಳ ಸೇವಾ ಜಾಗೃತಿ ಸೇವಾ ಕೆಲಸ ಸಾಥ್ ನೀಡಿದ ಯುವಕರು ಜಿ ಶ್ರೀನಾಥ್ ಬಾಬು, ಅಜಯ್ ಶಾಸ್ತ್ರಿ, ನವೀನ್, ಮಂಜುನಾಥ್, ಹರೀಶ್ ನಾಯ್ಡು, ಭೂಮಿಕಾ ಹಾಗೂ ಇನ್ನಿತರರು ಪ್ರತಿನಿತ್ಯ ಸಹಕಾರ ನೀಡುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.