ಕರ್ನಾಟಕ ಸೇನಾ ಪಡೆ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡರವರ ಜಯಂತಿ ಆಚರಣೆ

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ವಲಯ ಕಛೇರಿ 1ರ ಆವರಣದಲ್ಲಿ, ಆಧುನಿಕ ಬೆಂಗಳೂರು ನಿರ್ಮಾತ, ನಾಡಪ್ರಭು ಶ್ರೀ ಕೆಂಪೇಗೌಡರವರ ಜಯಂತಿ ಕಾರ್ಯಕ್ರಮವನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ ಕುಮಾರ್ ಗೌಡ ರವರು ಶನಿವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಳ್ಳಲು ಕೆಂಪೇಗೌಡರು ಕಾರಣರಾಗಿದ್ದಾರೆಂದರು.

ಕರ್ನಾಟಕದ ರಾಜಧಾನಿ ಬೆಂಗಳೂರು ವಿಶಾಲವಾಗಿ ಬೆಳೆಯಲು ತಳಹದಿ ಹಾಕಿದವರೇ ಕೆಂಪೇಗೌಡರ ಆಡಳಿತದ ಅವಧಿಯಲ್ಲಿ ನೂರಾರು ಕೆರೆ ಕಟ್ಟೆಗಳು, ಗುಡಿ ಗೋಪುರಗಳು, ಅಗ್ರಹಾರ ನಿರ್ಮಿಸಿದ್ದಾರೆ. ವ್ಯವಸ್ಥಿತವಾದ ಮಾರುಕಟ್ಟೆಗಳು ನಿರ್ಮಾಣಗೊಂಡಿವೆ. ಅವರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮುಡಾ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ, ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ರವರು ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಕೊರೊನಾ ಹರಡದಂತೆ ತಡೆಯಲು ಮಾಸ್ಕ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಸಮಾಜ ಸೇವಕರಾದ ಎಂ ಎನ್, ದೊರೆಸ್ವಾಮಿ, ನಾಡಪ್ರಭು ಕೆಂಪೇಗೌಡ ಸಂಘದ ಅಧ್ಯಕ್ಷ ಗಂಗಾಧರ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪತ್ರಕರ್ತ ಅನಿಲ್ ಕುಮಾರ್, ಮಹೇಂದ್ರ ಸಿಂಗ್ ಕಾಳಪ್ಪ, ಜೀವಧಾರ ಬ್ಲಡ್ ಬ್ಯಾಂಕ್ ನ ಗಿರೀಶ್, ವಿಕ್ರಮ್ ಅಯ್ಯಂಗಾರ್, ಡಾ ಶಾಂತರಾಜೇಅರಸ್, ಕುಮಾರ್ ಗೌಡ, ಬಸವರಾಜು, ಎಳನೀರು ರಾಮಣ್ಣ, ದರ್ಶನ್ ಗೌಡ, ಮಂಜುನಾಥ್ ಚಂದ್ರು ಉಪಸ್ಥಿತರಿದ್ದರು.