ಮೈಸೂರು: ಬಿಜೆಪಿ, ಜೆಡಿಎಸ್ ತೊರೆಯುವ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿದರು.
ಮೈಸೂರಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದರು.
ಬಿಎಸ್‌ವೈ ,ವಿಜಯೇಂದ್ರ ಭ್ರಷ್ಟಾಚಾರದಿಂದ ಬಿಜೆಪಿ ಶಾಸಕರ ನೈತಿಕ ಶಕ್ತಿ ಕುಗ್ಗಿದೆ. ಕೆಲ ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಯತ್ನಿಸುತ್ತಿದ್ದಾರೆ.
ಮೈಸೂರು ಭಾಗದ ಜೆಡಿಎಸ್ , ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆಂದು ಅವರು ಹೇಳಿದರು.
ಅವರ ಹೆಸರುಗಳನ್ನು ಈಗಲೇ ಬಹಿರಂಗ ಪಡಿಸಲ್ಲ ಎಂದು ಧ್ರುವನಾರಾಯಣ್ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರು ಪಕ್ಷಕ್ಕೆ ಬರುವವರನ್ನು ಆಹ್ವಾನಿಸಿದ್ದಾರೆ.ಪಕ್ಷಕ್ಕೆ ಬರುವವರ ಬಗ್ಗೆ ಅಲ್ಲಂವೀರಭದ್ರಪ್ಪ ಸಮಿತಿ ಪರಿಶೀಲನೆ ಮಾಡುತ್ತೆ ಎಂದರು.
ರಾಜ್ಯದಲ್ಲಿ ಬಿಜೆಪಿ ವೈಫಲ್ಯ ಸಾಕಷ್ಟಿದೆ.ಬಿಎಸ್‌ವೈ ಗೋಲ್ಡನ್ ಆಪರ್ಚುನಿಟಿ ಮಿಸ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಆರೋಪ ಇದ್ದರೂ ಸಿಎಂ ಬದಲಾವಣೆ ಮಾಡ್ತಿಲ್ಲ. ಹೈಕಮಾಂಡ್ ಬೆಂಬಲ ಇಲ್ಲದೆ ಯತ್ನಾಳ್, ವಿಶ್ವನಾಥ್ ಮಾತನಾಡ್ತಿಲ್ಲ. ಹೈಕಮಾಂಡ್ ಅವರೇ ಮಾಹಿತಿ ಕೊಟ್ಟು ಯತ್ನಾಳ್‌ರಿಂದ ಹೇಳಿಕೆ ಕೊಡಿಸುತ್ತಿದ್ದಾಬರೆಂದು ಅವರು ದೂರಿದರು.
ಅತ್ಯಂತ ಭ್ರಷ್ಟ ಸರಕಾರ ಇದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದೆ.ಆದರೆ ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸಚಿವರು, ಶಾಸಕರೇ ಹೇಳ್ತಿದ್ದಾರೆಂದರು. ಹೀಗಾಗಿ ಬಿಜೆಪಿಯಲ್ಲಿ ಮುಂದುವರೆಯಲು ಕೆಲ ಶಾಸಕರಿಗೆ ನೈತಿಕತೆ ಕುಂದಿದೆ. ಕಾಂಗ್ರೆಸ್ ಸೇರಲು ಆಸಕ್ತಿ ತೋರುತ್ತಿದ್ದಾರೆ ಎಂದು ಆರ್.ಧ್ರುವನಾರಾಯಣ್ ಹೇಳಿದರು.

