ಆಷಾಢ ಶುಕ್ರವಾರದಂದು ಮೈಸೂರು ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ

ಮೈಸೂರು: ಆಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟ ಮತ್ತು ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನ ದರ್ಶನ ದರ್ಶನಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಕೊರೊನಾ ಭೀತಿಯ ಕಾರಣ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

ಇನ್ನು ಮೈಸೂರು ಕೊರೊನಾದಿಂದ ಮುಕ್ತವಾಗಿಲ್ಲ. ಸಹಸ್ರಾರು ಭಕ್ತರು ಆಗಮಿಸುವ ಕಾರಣ ಮತ್ತೆ ಕೊರೊನಾ ಹರಡಬಹುದು ಎಂಬ ಕಾರಣದಿಂದ ಆಷಾಢಮಾಸದಂದು ಬೆಟ್ಟಕ್ಕೆ ಮತ್ತು ಉತ್ತನಹಳ್ಳಿಯ ದೇವರ ದರ್ಶನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಬಗಾದಿ ಗೌತಮ್ ತಿಳಿಸಿದ್ದಾರೆ.

ಚಾಮುಂಡೇಶ್ವರಿ ದೇವಿಯ ವರ್ಧಂತಿ ದಿನದಂದೂ ಕೂಡ ಈ ನಿರ್ಬಂಧವಿರುತ್ತದೆ ಎಂದು ಹೇಳಿದ್ದಾರೆ.

ಎರಡು ಅಮಾವಾಸ್ಯೆ ಮತ್ತು ಸರ್ಕಾರಿ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. ಸಂಜೆ ಮೇಲೆ ಬೆಟ್ಟಕ್ಕೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.