ಡಿ.ಕೆ.ಶಿವಕುಮಾರ್ ರಾಜಕಾರಣಿಯೋ, ರೌಡಿಯೋ ಎಂಬುದು ಬಿಜೆಪಿ ಪ್ರಶ್ನೆ

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುವ ಡಿ.ಕೆ. ಶಿವಕುಮಾರ್ ಅವರು ರಾಜಕಾರಣಿಯೋ, ರೌಡಿಯೋ ಎಂದು ರಾಜ್ಯ ಬಿಜೆಪಿ ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದೆ.

ಹೆಗಲ ಮೇಲೆ ಕೈ ಹಾಕಲು ಬಂದ ಕಾಂಗ್ರೆಸ್ ಕಾರ್ಯಕರ್ತನಿಗೆ ಮಂಡ್ಯದಲ್ಲಿ ಡಿ.ಕೆ. ಶಿವಕುಮಾರ್ ಕಪಾಳ ಮೋಕ್ಷ ಮಾಡಿದ ಘಟನೆ ಕುರಿತು ಬಿಜೆಪಿ ಟ್ವೀಟ್ ಮಾಡಿದೆ.

ಪಕ್ಷದ ಕಾರ್ಯಕರ್ತನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರ ಬಳಿ ಜನ ಸಾಮಾನ್ಯರು ಹೋದರೆ ಗತಿ ಏನು ಎಂದು ಬಿಜೆಪಿ ಕೇಳಿದೆ.

ಕೆಪಿಸಿಸಿ ಅಧ್ಯಕ್ಷರೇ ನೀವು ಹೊಡಿ, ಬಡಿ ರಾಜಕಾರಣದ ಗ್ರಾಂಡ್ ಅಂಬಾಡಿಸರ್ ಆಗಲು ಹೊರಟಿದ್ದೀರಾ ಎಂದು ಬಿಜೆಲಪಿ ಟ್ವೀಟ್ ನಲ್ಲಿ ಹೇಳಿದೆ.

ವ್ಯಕ್ತಿ ಮೇಲೆ ಸಾರ್ವಜನಿಕವಾಗಿ ಮಾಧ್ಯಮಗಳ ಎದುರು ಹಲ್ಲೆ ಮಾಡುವುದು ಡಿ.ಕೆ. ಶಿವಕುಮಾರ್ ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ.

ಈ ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿ ಅವರೇ ನೀವು ರಾಜಕಾರಣಿಯೋ ಅಥವಾ ರೌಡಿಯೋ ಎಂದು ಬಿಜೆಪಿ ಟ್ವೀಟರ್ ನಲ್ಲಿ ಪ್ರಶ್ನೆ ಮಾಡಿದೆ.