ಚೆನ್ನೈ: ಖ್ಯಾತ ನಟ ರಜಿನಿಕಾಂತ್ ತಮ್ಮ ರಜಿನಿ ಮಕ್ಕಳ್ ಮಂದ್ರಂ (ಆರ್ಎಂಎಂ) ಪಕ್ಷವನ್ನು ವಿಸರ್ಜಿಸಿದ್ದಾರೆ.
ರಜನಿಕಾಂತ್ ಅವರು ಸೋಮವಾರ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆರ್ಎಂಎಂ ಇನ್ಮುಂದೆ ಅಭಿಮಾನಿಗಳ ಕಲ್ಯಾಣ ಸಂಘವಾಗಿ ಮುಂದುವರಿಯಲಿದೆ ಎಂದು ರಜನಿಕಾಂತ್ ಹೇಳಿದರು.
ನಾನು ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲ ಎಂದು ಹೇಳಿದ ನಟ ರಜಿನಿಕಾಂತ್ ಪ್ರಸ್ತುತ ನನ್ನ ಆರೋಗ್ಯ ಸಮಸ್ಯೆ ಹಾಗೆಯೇ ಇರುವುದರಿಂದ ನಾವು ಏನನ್ನು ನಿರೀಕ್ಷಿಸಿದೆವೋ ಅದು ಸಂಭವಿಸುವುದಿಲ್ಲ. ಮತ್ತೊಮ್ಮೆ ರಾಜಕೀಯ ಪ್ರವೇಶಿಸುವ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ರಜಿನಿಕಾಂತ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ತಮ್ಮ ರಾಜಕೀಯ ನಿರ್ಧಾರವನ್ನು ಮರುಪರಿಶೀಲಿಸುವಾಗಿ ಹೇಳಿದ್ದರು. ಆದರೆ ಇದೀಗ ಮತ್ತೆ ರಾಜಕೀಯಕ್ಕೆ ಮರಳುವುದಿಲ್ಲವೆಂದು ತಿಳಿಸಿ ಪಕ್ಷವನ್ನು ವಿಸರ್ಜಿಸಿದ್ದಾರೆ.

