ನಾನೂ ಸಿದ್ದರಾಮಯ್ಯ ಜತೆಗೆ ಇದ್ದವನು; ಬೆಳಗ್ಗೆ ಎಷ್ಟು ಹೊತ್ತಿಗೆ ಏಳುತ್ತಿದ್ದರು ಏನ್ಮಾದ್ತಿದ್ರು ಗೊತ್ತಿದೆ -ಭೈರತಿ ಬಸವರಾಜ್

ದಾವಣಗೆರೆ: ನಾನೂ ಸಿದ್ದರಾಮಯ್ಯ ಜತೆಗೆ ಇದ್ದವನು; ಬೆಳಗ್ಗೆ ಎಷ್ಟು ಹೊತ್ತಿಗೆ ಏಳುತ್ತಿದ್ದರು ಏನ್ಮಾದ್ತಿದ್ರು ಗೊತ್ತಿದೆ ಎಂದು ಭೈರತಿ ಬಸವರಾಜ್ ಹೇಳಿದರು.

ದಾವಣಗೆರೆಯಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದರು.

ಸಿಎಂ ಬಿಎಸ್ವೈ ಈ ವಯಸ್ಸಲ್ಲೇ ದಿನಕ್ಕೆ 18 ತಾಸು ಕೆಲಸ ಮಾಡ್ತಾರೆ, ನಾನೂ ಸಿದ್ದರಾಮಯ್ಯ ಜತೆಗೆ ಇದ್ದವನು, ಅವರು ಬೆಳಗ್ಗೆ ಎಷ್ಟು ಹೊತ್ತಿಗೆ ಏಳುತ್ತಿದ್ದರು, ಸಿಎಂ ಯಡಿಯೂರಪ್ಪ ಎಷ್ಟು ಹೊತ್ತಿಗೆ ಏಳುತ್ತಾರೆ ಎಂಬುದು ನನಗೆ ಗೊತ್ತಿದೆ ಸುಮ್ಮನೇ ಆಪಾದನೆ ಮಾಡೋದು ಸರಿಯಲ್ಲ ಎಂದು ಬಿಜೆಪಿ ಸರ್ಕಾರ 20% ಸರ್ಕಾರ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಅವರು ಪ್ರತಿಕ್ರಿಯೆ ನೀಡಿದರು.

ಟೀಕೆ ಮಾಡಬೇಕು ಎಂಬ ಕಾರಣಕ್ಕೆ ಸಿದ್ದರಾಯ್ಯನವರಿಗೆ ಟೀಕೆ ಮಾಡುತಿದ್ದು, ವಿರೋಧ ಪಕ್ಷದ ನಾಯಕರು ಆಧಾರ ರಹಿತ ಟೀಕೆ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ದಿನಚರಿ ಬಗ್ಗೆ ಭೈರತಿ ಬಸವರಾಜ್ ಟೀಕಿಸಿದರು.

ಸಿಎಂ ಬಿಎಸ್ವೈ ಅತ್ಯುತ್ತಮ ಕೆಲಸ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆದಿವೆ, ಅತ್ಯುತ್ತಮ ಮಳೆಯೂ ಆಗುತ್ತದೆ. ಕರೊನಾ ಹಾವಳಿ ಕಡಿಮೆ ಆದರೆ ಅಭಿವೃದ್ಧಿಗೆ ಇನ್ನಷ್ಟು ಅನುಕೂಲವಾಗುತ್ತೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಪರಮಾಧಿಕಾರಿ
ಸಚಿವ ಸಂಪುಟ ವಿಸ್ತರಣೆ ಸಿಎಂ ಯಡಿಯೂರಪ್ಪರವರು ನಿರ್ಧಾರ ಕೈಗೊಳ್ಳುತ್ತಾರೋ ಅದೇ ಅಂತಿಮವಾಗಿದ್ದು ಗುರುವಾರ ಕ್ಯಾಬಿನೆಟ್ ಸಭೆ ಅಲ್ಲೇನು ತೀರ್ಮಾನ ಆಗುತ್ತೋ ನೋಡೋಣ, ಶಾಸಕ ಮುನಿರತ್ನನಿಗೆ ಸಚಿವ ಸ್ಥಾನ ನೀಡುವುದು ಖಚಿತ, ಮುಖ್ಯಮಂತ್ರಿಯವರು ಸಚಿವ ಸ್ಥಾನ ನೀಡುವುದಾಗಿ ಮಾತು ನೀಡಿದ್ದಾರೆ. ನಾವೂ ಹೊಸದಾಗಿ ಬಂದಿದ್ದೆವೆ, ಹೈಕಮಾಂಡ್ ತೀರ್ಮಾನಕ್ಕೆ ನಾವೂ ಬದ್ಧರಾಗಿರಬೇಕು, ಪಕ್ಷದಲ್ಲಿ ಕೆಲವರು ಹಳಬರಿದ್ದು, ಆದರೂ ನಮಗೆ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ ಎಂದರು.