ಜು. 25ರಿಂದ ಮೈಸೂರು ಅರಮನೆ ದೀಪಾಲಂಕಾರ

ಮೈಸೂರು: ಮೈಸೂರು ಅರಮನೆ ದೀಪಾಲಂಕಾರ ಜು. 25ರಿಂದ ಪುನರಾರಂಭವಾಗಲಿದೆ.

ಅರಮನೆ ಆವರಣದಲ್ಲಿ ಸಂಜೆ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಶುರುವಾಗಲಿದೆ.

ಪ್ರತಿ ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ರಾತ್ರಿ 7ರಿಂದ 8ರ ವರೆಗೆ ಮೈಸೂರು ಅರಮನೆ ದೀಪಾಲಂಕಾರ ಇರಲಿದೆ.

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ7ರಿಂದ 8 ಹಾಗೂ ಶನಿವಾರ 7ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ.

ಅರಮನೆ ದೀಪಾಲಂಕಾರ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು.