ಬೆಂಗಳೂರು: ಸಚಿವರು ಪ್ರಮಾಣ ಸ್ವೀಕಾರ ಮಾಡಿದ ಮೇಲೆ ಖಾತೆ ಹಂಚಿಕೆ ಮುನ್ನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಹೋದ್ಯೋಗಿಗಳಿಗೆ ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ಪರಿಶೀಲನೆಗಾಗಿ ನೂತನ ಸಚಿವರುಗಳಿಗೆ ಖಾತೆಗಳನ್ನು ನೀಡುವ ಮೊದಲೇ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದಾರೆ.
ಈ ಪಟ್ಟಿಯಲ್ಲಿನ ವಿಶೇಷವೆಂದರೆ ಎಸ್.ಟಿ.ಸೋಮಶೇಖರ್ ಅವರಿಗೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಹೊಣೆ ಕೊಡಲಾಗಿದೆ. ಅದೇ ರೀತಿ ಆನಂದ ಸಿಂಗ್ ಅವರಿಗೆ ಬಳ್ಳಾರಿ ಹಾಗೂ ಹೊಸದಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ಡಾ.ಕೆ.ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಉಸ್ತುವಾರಿಯನ್ನೇ ಪುನಾ ನೀಡಲಾಗಿದ್ದು, ನೂತನ ಸಚಿವ ಮುನಿರತ್ನ ಅವರಿಗೆ ಕೋಲಾರ ಜಿಲ್ಲೆಯ ಉಸ್ತುವಾರಿ ವಹಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದೆ..
ಗೋವಿಂದ ಎಂ.ಕಾರಜೋಳ: ಬೆಳಗಾವಿ, ಕೆ.ಎಸ್. ಈಶ್ವರಪ್ಪ:ಶಿವಮೊಗ್ಗ, ಆರ್.ಅಶೋಕ್:ಬೆಂಗಳೂರು ನಗರ, ಬಿ.ಶ್ರೀರಾಮುಲು: ಚಿತ್ರದುರ್ಗ, ವಿ.ಸೋಮಣ್ಣ: ರಾಯಚೂರು, ಉಮೇಶ್ ಕತ್ತಿ: ಬಾಗಲಕೋಟೆ, ಎಸ್.ಅಂಗಾರ: ದಕ್ಷಿಣ ಕನ್ನಡ, ಜೆ.ಸಿ.ಮಾಧುಸ್ವಾಮಿ: ತುಮಕೂರು, ಅರಗ ಜ್ಞಾನೇಂದ್ರ: ಚಿಕ್ಕಮಗಳೂರು, ಡಾ.ಸಿ.ಎನ್.ಅಶ್ವತ್ಥನಾರಾಯಣ: ರಾಮನಗರ, ಸಿ.ಸಿ.ಪಾಟೀಲ: ಗದಗ, ಆನಂದ ಸಿಂಗ್: ಬಳ್ಳಾರಿ & ವಿಜಯನಗರ, ಕೋಟಾ ಶ್ರೀನಿವಾಸ ಪೂಜಾರಿ: ಕೊಡಗು, ಪ್ರಭು ಚೌಹಾಣ್: ಬೀದರ್, ಮುರುಗೇಶ್ ನಿರಾಣಿ: ಕಲಬುರಗಿ, ಶಿವರಾಮ್ ಹೆಬ್ಬಾರ್: ಉತ್ತರ ಕನ್ನಡ, ಎಸ್.ಟಿ.ಸೋಮಶೇಖರ್: ಮೈಸೂರು-ಚಾಮರಾಜನಗರ, ಬಿ.ಸಿ.ಪಾಟೀಲ್: ಹಾವೇರಿ, ಭೈರತಿ ಬಸವರಾಜ್: ದಾವಣಗೆರೆ, ಡಾ.ಕೆ.ಸುಧಾಕರ್: ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ: ಹಾಸನ, ಶಶಿಕಲಾ ಜೊಲ್ಲೆ: ವಿಜಯಪುರ, ಎಂಟಿಬಿ ನಾಗರಾಜ್: ಬೆಂಗಳೂರು ಗ್ರಾಮಾಂತರ, ಕೆ.ಸಿ.ನಾರಾಯಣ ಗೌಡ: ಮಂಡ್ಯ, ಬಿ.ಸಿ.ನಾಗೇಶ್: ಯಾದಗಿರಿ, ಸುನೀಲ್ ಕುಮಾರ್: ಉಡುಪಿ, ಹಾಲಪ್ಪ ಆಚಾರ್: ಕೊಪ್ಪಳ, ಶಂಕರ ಪಾಟೀಲ್ ಮುನೇನಕೊಪ್ಪ: ಧಾರವಾಡ ಮತ್ತು ಮುನಿರತ್ನ: ಕೋಲಾರ.

