ಮೈಸೂರು: ಕೃಷ್ಣರಾಜ ಯುವಬಳಗ ವತಿಯಿಂದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾಜಿ ಶಾಸಕ ಎಂಕೆ. ಸೋಮಶೇಖರ್ ರವರು ಮಾತನಾಡಿ ಯುವ ರಾಜಕಾರಿಣಿಗಳಿಗೆ ಮಾದರಿಯಾಗಿರುವ ಸಿದ್ಧರಾಮಯ್ಯರವರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಿದ್ದರಾಮಯ್ಯನವರ ಆಡಳಿತವಧಿಯಲ್ಲಿ ರೂಪಿಸಿದ ಪ್ರತಿಯೊಂದು ಯೋಜನೆಗಳು ಎಲ್ಲಾ ಧರ್ಮ ಜನಾಂಗದ ಬಡವರ ಮನೆ ತಲುಪಿ ಜನಮಾನಸದಲ್ಲಿ ಸದಾ ಹಚ್ಚ ಹಸಿರಾಗಿ ಉಳಿದಿದೆ ಎಂದು ತಿಳಿಸಿದರು.
ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಜರಾಂ ಮಾತನಾಡಿ, ರಕ್ತದಾನದ ಜಾಗೃತಿಯನ್ನ ಸಿದ್ದರಾಮಯ್ಯರವರ ಹುಟ್ಟುಹಬ್ಬದಂದು ಅರ್ಥಪೂರ್ಣವಾಗಿ ಆಚರಿಸಿ ರಕ್ತದಾನದ ಮಹತ್ವದ ಸಂದೇಶವನ್ನ ಕೃಷ್ಣರಾಜ ಯುವ ಬಳಗ ಮಾಡಿದೆ ಎಂದರು.
ನಂತರ ಮಾಜಿ ಮಾಹಾಪೌರರಾದ ಟಿಬಿ ಚಿಕ್ಕಣ್ಣ ರವರು ಮಾತನಾಡಿ ಸಿದ್ಧರಾಮಯ್ಯ ರವರು ರಾಜಕಾರಣಿಯಾಗಿ ಎಲ್ಲಾ ಕ್ಷೇತ್ರದವರನ್ನ ಬೆಳಸಿದ್ದಾರೆ ಎಂದು ಹೇಳಿದರು.
75ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ನಗರಪಾಲಿಕೆ ಸದಸ್ಯ ಜೆ.ಗೋಪಿ, ಮಾಜಿ ನಗರ ಪಾಲಿಕೆ ಸದಸ್ಯ ಸುನೀಲ್, ಪ್ರದೀಪ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಆಲನಹಳ್ಳಿ ಪುಟ್ಟಸ್ವಾಮಿ, ಸಿಎಸ್ ರಘು, ದೇವರಾಜ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ನವೀನ್ ಕೆಂಪಿ, ಯುವ ಕಾಂಗ್ರಸ್ ರಾಜ್ಯ ಕಾರ್ಯದರ್ಶಿ ದೀಪಕ್ ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಹ್ಯಾರಿಸ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ ಬಸವರಾಜು, ಪುನೀತ್ ಮಾರುತಿ, ಅಸಂಘಟಿತ ವರ್ಗದ ಅಧ್ಯಕ್ಷ ವಿನಯ್, ಮದನ್, ವಿನಯ್ ಕಣಗಾಲ್, ರವಿ, ಸುನೀಲ್, ಆದರ್ಶ್ ಭೀಮ್, ಪ್ರತಾಪ್, ಕೆ ಬ್ಲಾಕ್ ಪಾಪು, ಕಾಡನಹಳ್ಳಿ ಸ್ವಾಮಿ, ಗುಣಶೇಖರ್, ವಿಶ್ವನಾಥ್, ಮಾದೇಶ್ ಮತ್ತಿತರರು ಉಪಸ್ಥಿತರಿದ್ದರು.

