ಮೈಸೂರು: ವಿ.ಕೆ.ಎಸ್ ಫ಼ೌಂಡೆಶನ್ ಹಾಗು ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಮೈಸೂರಿನ ಛಾಯದೇವಿ ಆಶ್ರಮದಲ್ಲಿ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಿಹಿ ತಿನಿಸು ಹಂಚುವ ಮೂಲಕ ಕೋವಿಡ್ ನಿಯಮಾನುಸಾರ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಈ ವರ್ಷ ಕೊರೊನಾ ಆಕ್ರಮಿಸಿರುವ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ. ಮಕ್ಕಳು ಶಾಲೆಯನ್ನು ನೋಡದೆ ಸುಮಾರು 2 ವರ್ಷಗಳೆ ಮುಗಿದಿದೆ. ಪ್ರತಿ ವರ್ಷ ಮಕ್ಕಳಿಗೆ ಶಾಲೆಯಲ್ಲಿ ಸಿಹಿ ಹಂಚುತ್ತ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿದ್ದೇವು. ಆದರೆ ಎರಡು ವರ್ಷಗಳಿಂದ ಮಕ್ಕಳು ಅದರ ನೆನಪನ್ನು ಕಳೆದುಕೊಂಡಿರುತ್ತಾರೆ. ಆದ್ದರಿಂದ ಈ ಮಕ್ಕಳಿಗೆ ಆ ನೆನಪನ್ನು ಮರುಕಳಿಸುವ ಒಂದು ಸಣ್ಣಾ ಪ್ರಯತ್ನ ನಮ್ಮದಾಗಿದೆ ಎಂದರು.
ಈ ಸಂಧರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಪ್ರದೀಪ್ ಕಾರ್ಯದರ್ಶಿ ತೇಜಸ್, ಉಪಾಧ್ಯಕ್ಷ ಗಗನ್ ಚಿದಂಬರಂ ಉಪಸ್ಥಿತರಿದ್ದರು.

