ಮೈಸೂರು ನಗರ ಭಾರತೀಯ ಜನತಾ ಪಾರ್ಟಿಯ ಕಾರ್ಯಲಯದಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಶುಕ್ರವಾರ ದೇವರಾಜ ಅರಸುರವರ 106 ಜನ್ಮ ಜಯಂತಿಯನ್ನು ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ನಂತರ ಮಾತಾನಾಡಿದ ರಘು ಕೌಟಿಲ್ಯರವರು ನಾಡು ಕಂಡ ಶ್ರೇಷ್ಠ ರಾಜಕಾರಣಿ ಇವರು ನಮ್ಮ ಮೈಸೂರು ಜಿಲ್ಲೆಯವರು ಅವರು. ಮುಖ್ಯಮಂತ್ರಿ ಯಾದಂತಹ ಸಂಧರ್ಭದಲ್ಲಿ ಉಳುವವನಿಗೆ ಭೂಮಿ ಎಂಬ ಕಲ್ಪನೆಯಿಂದ ಹಿಂದುಳಿದ ವರ್ಗದವರ ಹಾಗೂ ರೈತರ ಆಶಾ ಕಿರಣವಾದರು ಎಮದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಇಂತಹ ಮಹಾನ್ ನಾಯಕನ್ನು ಬಳಸಿಕೊಂಡು ಅವರ ಕಡೆಯ ಜೀವನ ಸಂಧರ್ಭದಲ್ಲಿ ಇವರನ್ನು ನಿರ್ಲಕ್ಷಿಸಿದ್ದು ಬೇಸರದ ಸಂಗತಿ ಎಂದು ಹೇಳಿದರು.
ಅರಸರ ಆಡಳಿತದ ಸಂಧರ್ಭದಲ್ಲಿ ಬಡಜನರಿಗೆ ನೀಡಿದ ಸೌಭಾಗ್ಯ ಜ್ಯೋತಿ ಯೋಜನೆಯನ್ನು ರಾಷ್ಟ್ರದಲ್ಲಿ ಜಾರಿಗೆ ತಂದಿದು ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು. ಹಾಗಾಗಿ ಭಾರತೀಯ ಜನತಾ ಪಾರ್ಟಿ ಅರಸುರವರ ತತ್ವ ಸಿದ್ದಾಂತಗಳನ್ನು ಅಳವಡಿಸಿ ಕೊಂಡಿದೆ ಎಂದರು.
ಬಿಜೆಪಿ ಮೈಸೂರು ನಗರ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಮಾತನಾಡಿ, ಭಾರತೀಯ ಜನತಾ ಪಾರ್ಟಿಯು ಹಿಂದುಳಿದ ವರ್ಗದವರ ಪರ ಇದ್ದು ಹಿಂದುಳಿದ ವರ್ಗದವರಾದ ನರೇಂದ್ರ ಮೋದಿಯವರು ಇತ್ತಿಚಿನ ಸಚಿವ ಸಂಪುಟದಲ್ಲಿ 27 ಜನ ಮಂತ್ರಿಗಳನ್ನು ಮಾಡಿ ಹಿಂದುಳಿದ, ದಲಿತ, ಪರಿಶಿಷ್ಟ ಪಂಗಡದವರ ಪರವಾಗಿ ಇದ್ದೇವೆ ಎಂದು ತೋರಿಸಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಜೋಗಿಮಂಜು, ನಗರ ಪಾಲಿಕೆ ಸದಸ್ಯ ಕೆ.ಜೆ.ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್, ಮಣಿರತ್ನಂ, ಶಿವರಾಜ್, ಸಾಮಾಜಿಕ ಜಾಲತಾಣ ಸಂಚಾಲಕ ಅಭಿಲಾಷ್, ಖಂಡೇಶ್, ಮಹದೇವು, ಹರೀಶ್‍ಅಂಕಿತ್, ಯೋಗನಂದ, ಜೀವನ್, ರಮೇಶ್, ಶೋಬಾ, ಎಸ್.ಟಿ.ಮೊರ್ಚಾ ಅಧ್ಯಕ್ಷ ಲಕ್ಷಣ್, ಕೃಷ್ಣ ನಾಯಕ್, ಶಿವು ಮುಂತಾದವರು ಇದ್ದರು.

