ಮೈಸೂರು: ಮಾಜಿ ಸಚಿವ ಜಿ.ಟಿ ದೇವೇಗೌಡ ಜೆಡಿಎಸ್‍ಗೆ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧೀಗಳೊಂದಿಗೆ ಜಿಟಿ ದೇವೇಗೌಡರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ತಾವು ಸೇರ್ಪಡೆ ಆಗುತ್ತಿರುವುದಾಗಿ ಜಿಟಿಡಿ ತಿಳಿಸಿದ್ದಾರೆ.
ನನ್ನ ಕ್ಷಮಿಸಿ ಅಪ್ಪಾಜಿ. ನಾನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜತೆ ಮಾತಾಡಿದ್ದೇನೆ. ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಹೇಳಿದ್ದೇನೆ ಎಂದು ಜಿಟಿಡಿ ತಿಳಿಸಿದರು.
ನನಗೆ, ನನ್ನ ಮಗನಿಗೆ ಇಬ್ಬರಿಗೂ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್ ಸಿಗುವ ವಿಶ್ವಾಸ ಇದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ನೀನು ಪಕ್ಷಕ್ಕೆ ಬಂದರೆ, ನಾನು ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದಾರೆಂದರು.
ಈ ಅವಧಿಯವರೆಗೂ ನಾನು ಜೆಡಿಎಸ್‍ನಲ್ಲಿ ಇರುತ್ತೇನೆ ಎಂದ ಅವರು ಆ. 25ರಂದು ನಡೆಯುವ ಮೈಸೂರು ಮೇಯರ್ ಚುನಾವಣೆಗೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜಿಟಿಡಿ ತಿಳಿಸಿದರು.

