ರಾತ್ರೋ ರಾತ್ರಿ ಸ್ಥಾಪನೆಯಾದ ಡಾ.ವಿಷ್ಣುವರ್ಧನ್ ಪ್ರತಿಮೆ; ರಾತ್ರೋ ರಾತ್ರಿ ತೆರವು

ಮೈಸೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಮೈಸೂರು ಅರಮನೆಯ ಮುಂಭಾಗದಲ್ಲಿರುವ ಡಾ. ವಿಷ್ಣುವರ್ಧನ್ ಉದ್ಯಾನವನದಲ್ಲಿ ರಾತ್ರೋ ರಾತ್ರಿ ಅಭಿಮಾನಿಗಳು ಅನಾವರಣಗೊಳಿಸಿದ್ದರು.

ಆದರೆ ಅದೇ ಪ್ರತಿಮೆಯನ್ನು ರಾತ್ರೋ ರಾತ್ರಿಯೇ ಯಾರೋ ತೆರವುಗೊಳಿಸಿದ್ದಾರೆ.
ವಿಷ್ಣು ಪ್ರತಿಮೆ ತೆರವು ವಿರೋಧಿಸಿ ಇದೀಗ ಅಭಿಮಾನಿಗಳು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರು ಮಾತನಾಡಿ ಕಳೆದ 10 ವರ್ಷದಿಂದ ಡಾ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಡಾ. ವಿಷ್ಣುವರ್ಧನ್ ಉದ್ಯಾನವನದಲ್ಲಿ ನಿರ್ಮಿಸುವಂತೆ ನಾವು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೆವು. ಆದರೆ ಸರ್ಕಾರ ನಮ್ಮ ಬೇಡಿಕೆಯನ್ನು ಈವರೆಗೂ ಈಡೇರಿಸಿರಲಿಲ್ಲ. ಹಾಗಾಗಿ ನಾವೇ ಖುದ್ದು ನಿರ್ಮಾಣ ಪ್ರತಿಮೆ ತಂದಿಟ್ಟಿದ್ದೆವು. ಆದರೆ ಈಗ ಅದನ್ನು ಪೆÇಲೀಸರೇ ತೆರವುಗೊಳಿಸಿದ್ದಾರೆಂಬುದು ನಮ್ಮ ಅನುಮಾನ ಎಂದರು.

ನಾವು ಪ್ರತಿಮೆ ಇರಿಸಿದ್ದನ್ನು ತೆರವುಗೊಳಿಸಿದ್ದು ಯಾಕೆ ಎಂದು ವಿಷ್ಣು ಆಭಿಮಾನಿಗಳು ಪ್ರಶ್ನಿಸಿ, ಪ್ರತಿಮೆಯನ್ನು ಅಲ್ಲಿಯೇ ಪುನಃ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.