ಮೈಸೂರು: ಅಮೃತ ಸಂಜೀವಿನಿ ಟ್ರಸ್ಟ್ ಹಾಗೂ ಮೈಸೂರು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಮೈಸೂರು ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕೋವಿಡ್ -19 ಲಿಸಿಕ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಮಹದೇವಪುರ ಮತ್ತು ಸುತ್ತಮುತ್ತಲಿನ ಸುಮಾರು 350 ನಿವಾಸಿಗಳಿಗೆ ಕೋವಿಡ್ -19 ಲಸಿಕೆಯನ್ನು ಸುಮಾರು 350 ಹಾಕಿ ಎಲ್ಲರಿಗೂ ಸ್ಥಳದಲ್ಲೇ ಉಚಿವಾಗಿ ಕೋವಿಡ್ -19 ಪ್ರಮಾಣ ಪತ್ರವನ್ನು ನೀಡಲಾಯಿತು.
ಶಿಬಿರದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಿ.ಕುಮಾರ್, ಮೈಸೂರು ತಾಲ್ಲೂಕು ಆರೋಗ್ಯಾಧಕಾರಿಗಾಳದ ಡಾ.ಮಹದೇವ ಪ್ರಸಾದ್, ಅಮೃತ ಸಂಜೀವಿನಿ ಸಂಸ್ಥೆಯ ಅಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಹಂಸರಾಜ್, ಖಜಾಂಚಿ ವಿಘ್ನೇಶ್, ಸದಸ್ಯರಾದ ನಾಗೇಶ್ ಕುಮಾರ್, ಸುನಿಲ್ ಕುಮಾರ್, ಸ್ವಯಂಸೇವಕರಾದ ಹರೀಶ, ಅರುಣ್ ಕುಮಾರ್, ಅನಿಲ್ ರವರು ಪಾಲ್ಗೊಂಡಿದ್ದರು.

