ಮೈಸೂರಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸಲಿರುವ ಸರಸ್ವತಿ ಚಿತ್ರಮಂದಿರ?

ಮೈಸೂರು: ಕೋವಿಡ್ ನಿಂದ ಸಾಕಷ್ಟು ಸಂಕಷ್ಟಗಳು ಒಂದರ ಮೇಲೊಂದು ಬಂದೊದಗಿದೆ.

ಕೋವಿಡ್ ನ ಪರಿಣಾಮ ಬಹುತೇಕ ಕ್ಷೇತ್ರಗಳಲ್ಲಿ ಆರ್ಥಿಕ ನಷ್ಟದಿಂದ ನಲುಗುವಂತಾಗಿದೆ.

ಕೊರೊನಾ ಮತ್ತು ಲಾಕ್ ಡೌನ್ ನಿಂದಾಗಿ ಹಲವಾರು ಉದ್ಯಮ, ಸಂಸ್ಥೆಗಳು ಮುಚ್ಚಿದ್ದು, ಇದೀಗ ನಗರದ ಮತ್ತೊಂದು ಚಿತ್ರಮಂದಿರ ಪ್ರದರ್ಶನವನ್ನು ನಿಲ್ಲಿಸಲಿದೆ.

ಮೈಸೂರಿನ ಸರಸ್ವತಿಪುರಂನಲ್ಲಿರುವ ಸರಸ್ವತಿ ಚಿತ್ರಮಂದಿರ ಬಾಗಿಲು ಮುಚ್ಚಲಿದೆ ಎಂದು ತಿಳಿದು ಬಂದಿದೆ.

ಹಲವಾರು ವರ್ಷಗಳಿಂದ ಸಿನಿ ಪೇಕ್ಷರಿಗೆ ಮನರಂಜನೆ ನೀಡುತ್ತಿದ್ದ ಸರಸ್ವತಿ ಚಿತ್ರ ಮಂದಿರ ಬಹುತೇಕ ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳೇ ಪ್ರದರ್ಶನವಾಗುತ್ತಿತ್ತು. ಈ ಚಿತ್ರಮಂದಿರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.

ಇಂತಹ ಚಿತ್ರ ಮಂದಿರ ಈಗ ಸಿನಿಮಾ ಪ್ರದರ್ಶನವಿಲ್ಲದ ಕಾರಣದಿಂದ ಥಿಯೇಟರ್ ಮಾಲೀಕರು ಬಾಗಿಲು ಮುಚ್ಚಲು ತೀರ್ಮಾನ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.

ಕಳೆದ ಒಂದು ವರ್ಷ ಅವಧಿಯಲ್ಲಿ ಮೈಸೂರಿನಲ್ಲಿ 3 ಪ್ರತಿಷ್ಠಿತ ಚಿತ್ರಮಂದಿರಗಳು ಮುಚ್ಚಿವೆ.

ಶಾಂತಲಾ, ಲಕ್ಷ್ಮಿ ಚಿತ್ರಮಂದಿರ ಬಂದ್ ಆದ ಬಳಿಕ ಇದೀಗ ಸರಸ್ವತಿ ಚಿತ್ರಮಂದಿರವೂ ಬಂದ್ ಆಗಲಿರುವುದು ಸಿನಿ ಪ್ರಿಯರಿಗೆ ಬೇಸರ ಉಂಟು ಮಾಡಿದೆ.