ಸಿದ್ದರಾಮಯ್ಯ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ –ಬಿಎಸ್ ವೈ

ದಾವಣಗೆರೆ: ಸಿದ್ದರಾಮಯ್ಯ ಏನೇ ಆರೋಪ ಮಾಡಿದರೂ ಗೆಲ್ಲಲ್ಲ, ಅವರ ಆರೋಪಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ವೈ ವಾಗ್ದಾಳಿ ನಡೆಸಿದರು.

ದಾವಣಗೆರೆಯಲ್ಲಿ ಬಿಎಸ್‌ ವೈ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸಿಂದಗಿ, ಹಾನಗಲ್ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯರ ಅಪಪ್ರಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ವಿಪಕ್ಷ ಅಂದ ಮೇಲೆ ಅಪಪ್ರಚಾರ ಸ್ವಾಭಾವಿಕವಾಗಿರುತ್ತದೆ. ಸಿದ್ದರಾಮಯ್ಯ ಏನ್ ಮಾತಾನಾಡಿದರೂ ಏನು ಆಗಲ್ಲ. ಫಲಿತಾಂಶ ಬಂದ ಮೇಲೆ ಅವರಿಗೆ ಗೊತ್ತಾಗುತ್ತೆ ಎಂದ ಬಿಎಸ್ ವೈ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಕೊನೆಯಲ್ಲಿ ಫಲಿತಾಂಶ ಬಿಜೆಪಿ ಪರವಾಗಿ ಬರುತ್ತೆ, ಹಾನಗಲ್, ಸಿಂದಗಿಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ, ನಮ್ಮೆಲ್ಲ ನಾಯಕರು ಎರಡು ಕ್ಷೇತ್ರದಲ್ಲಿ ಟೀಕಾಣಿ ಹೂಡಿದ್ದಾರೆ, ಎರಡು ಕ್ಷೇತ್ರದಲ್ಲಿ ದೊಡ್ಡ ಸಭೆ ನಡೆದಿದೆ. ಸಂಪೂರ್ಣವಾಗಿ ಜನ ಮೋದಿಯವರ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಿದ್ದಾರೆಂದರು.